Saturday, August 13, 2022

Latest Posts

ಕೊರೋನಾ ಲಾಕ್‌ಡೌನ್| ಸರಕಾರಕ್ಕೆ ನಿರ್ಧಾರ ಆಯ್ಕೆಯೇ ಸವಾಲು: ಆನಂದ ಮಹೀಂದ್ರ

ಹೊಸದಿಲ್ಲಿ :ಕೊರೋನಾ ವೈರಾಣು ಹೆಮ್ಮಾರಿಯ ವಿರುದ್ಧದ ಹೋರಾಟದಲ್ಲಿ ಲಾಕ್‌ಡೌನ್ ವಿಸ್ತರಣೆ ಕಷ್ಟಸಾಧ್ಯ. ಲಾಕ್‌ಡೌನ್ ವಿಸ್ತರಣೆ ಕೇವಲ ಆರ್ಥಿಕ ಬಿಕ್ಕಟ್ಟಿಗಷ್ಟೇ ಕಾರಣವಾಗದೆ ಇನ್ನೊಂದು ವೈದ್ಯಕೀಯ ಬಿಕ್ಕಟ್ಟಿಗೂ ಕಾರಣವಾಗುವಂಥದ್ದು. ಆದರೆ ಆಡಳಿತ ನಡೆಸುವವರಿಗೆ ಈ ನಿಟ್ಟಿನಲ್ಲಿ ನಿರ್ಧಾರವೊಂದನ್ನು ತೆಗೆದುಕೊಳ್ಳುವುದೇ ಕಠಿಣ ಸವಾಲು ಎಂಬುದಾಗಿ ಮಹೀಂದ್ರ ಗ್ರೂಪಿನ ಅಧ್ಯಕ್ಷ ಆನಂದ ಮಹೀಂದ್ರ ಹೇಳಿದ್ದಾರೆ.
ಆಳುವವರಿಗೆ ಈಗ ನಿರ್ಧಾರವೊಂದನ್ನು ತೆಗೆದುಕೊಳ್ಳುವುದು ಅಷ್ಟು ಸುಲಭದ ಆಯ್ಕೆಯಲ್ಲ. ಆದಾಗ್ಯೂ ಲಾಕ್‌ಡೌನ್ ವಿಸ್ತರಣೆ ಆರ್ಥಿಕ ಬಿಕ್ಕಟ್ಟಿಗಷ್ಟೇ ಕಾರಣವಾಗುವುದಲ್ಲ, ಇದು ಮಾನಸಿಕ ಖಿನ್ನತೆಯಂತಹ ಸಮಸ್ಯೆಗೂ ಕಾರಣವಾಗಿ ಇನ್ನೊಂದು ಬಿಕ್ಕಟ್ಟಿಗೆ ಹೇತುವಾಗುವ ಅಪಾಯವಿದೆ .ಯಾಕೆಂದರೆ ಈಗ ಕೋವಿಡೇತರ ರೋಗಿಗಳ ಬಗ್ಗೆ ಕಡಿಮೆ ಗಮನ ಹರಿಸುವದರಿಂದ ಬೇರೆಯೇ ಆದ ಪರಿಣಾಮಗಳು ಉಂಟಾಗುವ ಅಪಾಯವಿದೆ ಎಂದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss