ಕೊರೋನಾ ತೊಲಗಿಸುವ ದಿಸೆಯಲ್ಲಿ ಕೇಂದ್ರ ಸರ್ಕಾರ ಮೇ 3ರವರೆಗೆ ಲಾಕ್ಡೌನ್ ವಿಸ್ತರಿಸಿದ ಬೆನ್ನಲ್ಲೇ, ಕೆಲವು ಮಾರ್ಗಸೂಚಿ ಪ್ರಕಟಿಸಿದ್ದು, ಏ. 20ರ ಬಳಿಕ ಸಾರ್ವಜನಿಕ ಜೀವನ ತಹಬಂದಿಗೆ ತರುವ ದಿಸೆಯಲ್ಲಿ ಹಲವು ವಿನಾಯಿತಿ ನೀಡಲಾಗಿದೆ. ಅದರಲ್ಲೂ, ದೇಶದ ಬೆನ್ನೆಲುಬಾದ ಕೃಷಿ ಚಟುವಟಿಕೆ, ದಿನಗೂಲಿ ಕಾರ್ಮಿಕರು, ಗುಡಿ ಕೈಗಾರಿಕೆ, ಇ-ಕಾಮರ್ಸ್ ಸೇರಿ ವಿವಿಧ ಕ್ಷೇತ್ರಗಳಿಗೆ ಮರುಜೀವ ಬರಲಿದೆ. ಹಾಗಾದರೆ, ಕೊರೋನಾ ಹಾಟ್ಸ್ಪಾಟ್ ಅಲ್ಲದ ಪ್ರದೇಶಗಳಲ್ಲಿ ಯಾವೆಲ್ಲ ಸೌಲಭ್ಯ ಇರಲಿವೆ? ಯಾವ ಸೇವೆಗಳಿಗೆ ಕತ್ತರಿ ಬೀಳಲಿದೆ? ಯಾರಿಗೆಲ್ಲ ಅನುಕೂಲ ಎಂಬುದರ ಸಂಕ್ಷಿಪ್ತ ವಿವರ ಇಲ್ಲಿದೆ.
ಈ ಸೇವೆಗಳು ಲಭ್ಯ
ಆರೋಗ್ಯ ಕ್ಷೇತ್ರ
- ದೇಶದ ಎಲ್ಲ ಆಸ್ಪತ್ರೆ, ನರ್ಸಿಂಗ್ ಹೋಂ, ಕ್ಲಿನಿಕ್.
- ಜನೌಷಧ ಕೇಂದ್ರ ಸೇರಿ ಮೆಡಿಕಲ್, ವೈದ್ಯಕೀಯ ಉಪಕರಣ ಮಳಿಗೆ.
- ಮೆಡಿಕಲ್ ಲ್ಯಾಬ್, ಔಷಧ ಸಂಗ್ರಹ ಕೇಂದ್ರಗಳು.
- ಪಶು ಚಿಕಿತ್ಸಾ ಕೇಂದ್ರ, ಲಸಿಕೆ ಮತ್ತು ಔಷಧ ಮಾರಾಟ ಕೇಂದ್ರ.
- ಔಷಧ ಉತ್ಪಾದನೆ ಘಟಕ, ಫಾರ್ಮಾಸುಟಿಕಲ್, ವೈದ್ಯಕೀಯ ಡಿವೈಸ್ ಕಂಪನಿ.
- ಆರೋಗ್ಯ ಕೇಂದ್ರಗಳು, ಆಂಬುಲೆನ್ಸ್ ನಿರ್ಮಾಣ ಘಟಕ.
- ಮಿನುಗಲಿರುವ ಮೀನುಗಾರಿಕೆ
- ಮೀನುಗಾರಿಕೆ, ಹಡಗುಗಳ ಸಂಚಾರ, ಮಾರಾಟ, ಮೀನುಗಳ ಸಾಕಣೆ, ಮೀನು ಸಂಗ್ರಹ, ಪ್ಯಾಕೇಜ್, ಶೀತಲೀಕರಣಕ್ಕೆ ಅವಕಾಶ.
- ಮೊಟ್ಟೆಗಳ ಕೇಂದ್ರ, ಅಕ್ವೇರಿಯಂ ಮಾರಾಟ, ಮೀನು ಉತ್ಪನ್ನ ಮಾರಾಟ, ಮೀನು ಕಾರ್ಮಿಕರ ಕೆಲಸ ಆರಂಭ.
ಸಾರ್ವಜನಿಕ ಉಪಯೋಗ
- ಎಲ್ಪಿಜಿ, ಪೆಟ್ರೋಲ್ ಸೇರಿ ತೈಲ, ಅನಿಲ ಉತ್ಪನ್ನಗಳ ಸಾಗಣೆ, ಸಂಗ್ರಹಣೆ, ಮರು ತುಂಬುವಿಕೆ.
- ದೇಶದ ಕೇಂದ್ರ, ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶ ಹಂತದಲ್ಲಿ ಇಂಧನ ಉತ್ಪಾದನೆ, ಸಂಗ್ರಹ ಹಾಗೂ ಸರಬರಾಜು.
- ಅಂಚೆ ಕಚೇರಿ ಸೇರಿ ಅಂಚೆಯ ಸಕಲ ಸೇವೆಗಳೂ ಲಭ್ಯ.
ಪಶು ಸಂಗೋಪನೆ
- ಹಾಲು, ಹಾಲಿನ ಉತ್ಪನ್ನ ಸಂಗ್ರಹ, ಮಾರಾಟ, ಸಾಗಣೆಗೆ ಅವಕಾಶ.
- ಕೋಳಿ ಸಾಕಾಣಿಕೆ, ಪಶು ಸಂಗೋಪನೆ
- ಮೇವು, ಹುಲ್ಲು, ಮೆಕ್ಕೆ ಜೋಳ ಸೇರಿ ಕಚ್ಚಾ ವಸ್ತುಗಳ ಉತ್ಪಾದನೆ.
- ಗೋಶಾಲೆ ಕಾರ್ಯಾರಂಭ
ಕೃಷಿಕರಿಗೆ ಖುಷಿ
- ರೈತರು, ಕೃಷಿ ಕಾರ್ಮಿಕರು ಕೃಷಿ, ತೋಟಗಾರಿಕೆಯಲ್ಲಿ ತೊಡಗಲು ಅನುಮತಿ.
- ಕೃಷಿ ಉತ್ಪನ್ನ ಸರಬರಾಜು ಮಾಡುವ ಮಳಿಗೆಗಳು.
- ಎಪಿಎಂಸಿ ಮಂಡಿಗಳು, ಕೃಷಿ ಸಂಘ, ಕೋ-ಆಪರೇಟಿವ್ ಬ್ಯಾಂಕ್.
- ಕೃಷಿ ಉತ್ಪನ್ನ ಮಾರಾಟ ಮಾಡಲು ಅವಕಾಶ, ಕೇಂದ್ರ ಆರಂಭ.
- ಕೃಷಿ ಸಲಕರಣೆ ಅಂಗಡಿ, ಬಿಡಿ ಭಾಗಗಳ ಅಂಗಡಿ, ರಿಪೇರಿ ಅಂಗಡಿ
- ರಸಗೊಬ್ಬರ, ಬೀಜಗಳ ಮಾರಾಟ ಕೇಂದ್ರ
- ಕಟಾವು, ಬಿತ್ತನೆ ಸೇರಿ ಕೃಷಿ ಸಂಬಂಧಿತ ಯಂತ್ರಗಳು
ನಿರ್ಮಾಣ
- ಪುರಸಭೆ ಹಾಗೂ ನಗರ ಸಭೆ ವ್ಯಾಪ್ತಿ ಹೊರಗಡೆ ಇರುವ ಕಟ್ಟಡ, ರಸ್ತೆ, ನೀರಾವರಿ, ಬಹುಮಹಡಿ ಕಟ್ಟಡ ನಿರ್ಮಾಣ ಸಾಧ್ಯ.
- ಮರು ನವೀಕರಿಸ ಬಹುದಾದ ಇಂಧನ ಯೋಜನೆ, ಕಟ್ಟಡ ನಿರ್ಮಾಣ