ಕೊರೋನಾ ಲಾಕ್ ಡೌನ್ ಆದೇಶ ಉಲ್ಲಂಘನೆ: 147 ವಾಹನಗಳನ್ನು ವಶ: 67,700 ರೂ. ದಂಡ

0
86

ಕೊಪ್ಪಳ: ಕೊರೋನಾ ಲಾಕ್ ಡೌನ್ ಆದೇಶ ಉಲ್ಲಂಘನೆ ಹಿನ್ನಲೆಯಲ್ಲಿ ಸೋಮವಾರ ಇಂದು ಜಿಲ್ಲೆಯಾದ್ಯಂತ 147 ವಾಹನಗಳನ್ನು ವಶಪಡಿಸಿಕೊಂಡು 131 ಪ್ರಕರಣಗಳನ್ನು ದಾಖಲಿಸಿ ಒಟ್ಟು 67700 ರೂ ಗಳ ದಂಡ ವಿಧಿಸಲಾಗಿದೆ ಎಂದು ಜಿಲ್ಲಾ ಎಸ್ಪಿ ಜಿ. ಸಂಗೀತಾ ಹೇಳಿದರು.
ಪ್ರಕಟಣೆಯ ಮೂಲಕ ತಿಳಿಸಿದ ಅವರು, ಲಾಕ್ ಡೌನ್ ಹಿನ್ನಲೆಯಲ್ಲಿ ಯಾರು ಹೊರಗೆ ಬರದಂತೆ ಸೂಚಿಸಿದರೂ ಜನರು ಖಾಲಿ ತಿರುಗಾಟ ಹೆಚ್ಚಾಗಿದೆ. ಇದರಿಂದ ಬೆಸತ್ತ ಪೋಲಿಸರು ಇಂದು 108 ಲಘು ಪ್ರಕರಣ ದಾಖಲಿಸಿ ಜಿಲ್ಲೆಯಾದ್ಯಂತ 147 ವಾಹನಗಳನ್ನು ವಶಪಡಿಸಿಕೊಂಡು 131 ಪ್ರಕರಣಗಳನ್ನು ದಾಖಲಿಸಿ ಒಟ್ಟು 67700 ರೂ ಗಳ ದಂಡ ವಿಧಿಸಲಾಗಿದೆ. ಒಟ್ಟರೆ ಲಾಕ್ ಡೌನ್  ಆದಾಗಿಂದ ಇಲ್ಲಿವರೆಗೂ ಒಟ್ಟು 16 ಅಕ್ರಮ ಮಾಡಿದ ಪ್ರಕರಣ ದಾಖಲಿಸಿದೆ ಎಂದು ತಿಳಿಸಿದರು.

LEAVE A REPLY

Please enter your comment!
Please enter your name here