Tuesday, July 5, 2022

Latest Posts

ಕೊರೋನಾ ಲಾಕ್ ಡೌನ್ ಮಧ್ಯೆ ಮದ್ಯ ಆಕ್ರಮ ಮಾರಾಟ

ಯಾದಗಿರಿ: ಕೊರೋನಾ ಪ್ರಕರಣಗಳ ಕಡಿವಾಣ ಹಾಕಲು ಜಿಲ್ಲಾಧಿಕಾರಿ ಎಂ.ಕೂರ್ಮರಾವ್ ಅವರು ಜುಲೈ 22 ರ ವರಗೆ ಲಾಕ್ ಡೌನ್ ಜಾರಿ ಮಾಡಿ ಮದ್ಯ ಮಾರಾಟಕ್ಕೆ ನಿಷೇಧ ಮಾಡಿದ್ದಾರೆ. ಆದರೂ ಜಿಲ್ಲಾಡಳಿತ ಮದ್ಯ ಮಾರಾಟ ನಿಷೇಧ ಮಾಡಿ ಕಟ್ಟುನಿಟ್ಟಿನ ಕ್ರಮಕೈಗೊಂಡರು ಕೂಡ ಯಾದಗಿರಿ ಜಿಲ್ಲೆಯಲ್ಲಿ ಲಾಕ್ ಡೌನ್ ನಡುವೆಯು ಮದ್ಯ ಮಾರಾಟ ಅಕ್ರಮ ಮಾಡಲಾಗುತಿದೆ.
ಖಚತ ಮಾಹಿತಿ ಮೇರೆಗೆ ಸುರಪುರ ಡಿವೈಎಸ್ಪಿ ವೆಂಕಟೇಶ ಹೊಗಿಬಂಡಿ ಅವರ ನೇತೃತ್ವದ ತಂಡವು ಶಹಾಪುರ ಪಟ್ಟಣದ ವೈಷ್ಣವಿ ಲಾಡ್ಜ್ ಹಾಗೂ ಭಾಗ್ಯವಂತಿ ಡಾಬಾದ ಮೇಲೆ ದಾಳಿ ಮಾಡಿ 2.30 ಲಕ್ಷ ರೂ ಮೌಲ್ಯದ ಮದ್ಯ ಜಪ್ತಿ ಮಾಡಲಾಗಿದೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಲಾಡ್ಜ್ ಮಾಲಿಕ ಉದಯ ಅವರನ್ನು ಪೊಲೀಸರು ಬಂಧಿಸಿ ತನಿಖೆ ಮುಂದುವರಿಸಿದ್ದಾರೆ. ಇದಲ್ಲದೆ ಎರಡು ಪ್ರತ್ಯೇಕ ಪ್ರಕರಣಗಳಲ್ಲಿ 2 ಲಕ್ಷ 30 ಸಾವಿರ ಮೌಲ್ಯದ ಅಕ್ರಮ ಮದ್ಯ ಜಪ್ತಿ ಮಾಡಲಾಗಿದ್ದು ಸಹ ಪೂಲೀಸ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss