ಹೊಸದಿಲ್ಲಿ: ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಕೊರೋನಾ ಲಾಕ್ ಡೌನ್ ವಿಸ್ತರಣೆ ಕುರಿತು ಉನ್ನತ ಮಟ್ಟದ ಸಭೆ ನಡೆಸುತ್ತಿದ್ದಾರೆ. ಸಭೆಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ, ರೈಲ್ವೇ ಸಚಿವ ಪಿಯುಶ್ ಗೋಯಲ್, ರಾಜಿವ್ ಗೌಬಾ, ಬಿಪಿನ್ ರಾವತ್ ಭಾಗಿಯಾಗಿದ್ದಾರೆ.
ದೇಶದಲ್ಲಿ ಮೇ.3ರ ಬಳಿಕ ಲಾಕ್ ಡೌನ್ ಮುಂದುವರಿಕೆ ಮತ್ತು ಸಡಿಲಿಕೆ ಕುರಿತಾಗಿ ಸಭೆ ಸಡೆಸುತ್ತಿದ್ದಾರೆ. ಗುರುವಾರವೂ ಪ್ರಧಾನಿ ಮೋದಿ ಕ್ಯಾಬಿನೆಟ್ ನಲ್ಲಿ ಸಭೆ ನಡೆಸಿದ್ದು, ವಿದೇಶಿ ಹೂಡಿಕೆಗಳನ್ನು ಆಕರ್ಷಿಸುವ ಕುರಿತಾಗಿ ಚರ್ಚೆ ನಡೆಸಿದ್ದಾರೆ ಎಂದು ವರದಿಯಾಗಿದೆ.
ಈಗಾಗಲೇ ಮೇ.3ರಂದು ಲಾಕ್ ಡೌನ್ 2.0 ಅಂತ್ಯಗೊಳ್ಳಲಿದ್ದು, ಕೇಂದ್ರ ಸರ್ಕಾರ ರಾಜ್ಯಗಳಲ್ಲಿನ ಕೊರೋನಾ ಅಂಕಿ ಅಂಶಗಳ ಪ್ರಕಾರ ರೆಡ್, ಆರೆಂಜ್ ಮತ್ತು ಗ್ರೀನ್ ಜೋನ್ ಎಂದು ಮೂರು ವಿಭಾಗಗಳಾಗಿ ವಿಂಗಡಿಸಲಾಗಿದೆ.