Tuesday, August 16, 2022

Latest Posts

ಕೊರೋನಾ ವಿಚಾರದಲ್ಲಿ ಭ್ರಷ್ಟಾಚಾರ: ಡಿಕೆಶಿ ಆರೋಪ

ಮಂಗಳೂರು: ಕೋವಿಡ್ ವಿಚಾರದಲ್ಲಿ ಪ್ರತಿ ಪಕ್ಷವಾಗಿ ಸರ್ಕಾರದ ಜೊತೆ ಕೈ ಜೋಡಿಸಿದ್ದೇವೆ. ಆದರೆ ಕೊರೋನಾ ವಿಚಾರದಲ್ಲಿ ಸರ್ಕಾರದ ಭ್ರಷ್ಟಾಚಾರಕ್ಕೆ ನಾವು ಬೆಂಬಲ ನಿಡೋದಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.

ಅವರು ಶುಕ್ರವಾರ ಮಂಗಳೂರಿನಲ್ಲಿರುವ ದ.ಕ. ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ನಾಲ್ಕು ಲಕ್ಷದ ವೆಂಟಿಲೇಟರ್ ಕಿಟ್ ನ್ನು 18 ಲಕ್ಷಕ್ಕೆ ಖರೀದಿ ಮಾಡಲಾಗಿದೆ. ಥರ್ಮಲ್ ಸ್ಕ್ಯಾನ್ ಖರೀದಿಯ ಲೆಕ್ಕವೂ ಸರಿಯಾಗಿಲ್ಲ. ನಾನು ಸುಳ್ಳು ಹೇಳುವುದಾದರೆ ಸರಕಾರ ನನ್ನ ಮೇಲೆ ಕೇಸ್ ಮಾಡಲಿ. ಬಂಧಿಸಿ ಮಾನನಷ್ಟ ಮೊಕದ್ದಮೆ ಬೇಕಾದರೆ ಹಾಕಲಿ. ಕೋವಿಡ್ ಉಪಕರಣ ಖರೀದಿ ವಿಚಾರವಾಗಿ ಸರಕಾರ ತನಿಖೆ ಮಾಡಲು ಅವಕಾಶ ಮಾಡಿಕೊಡಬೇಕು ಎಂದು ಒತ್ತಾಯಿಸಿದ ಅವರು ಪಬ್ಲಿಕ್ ಅಕೌಂಟ್ಸ್ ಕಮಿಟಿ ಮೀಟಿಂಗ್ ಗೆ ಸರಕಾರ ಅವಕಾಶ ಮಾಡಿಕೊಡಬೇಕು ಎಂದರು.

ರಾಜ್ಯದಲ್ಲಿ ಅಭಿವೃದ್ಧಿ ಕಾರ್ಯಗಳು ಸ್ಥಗಿತಗೊಂಡಿವೆ. ಸರ್ಕಾರಕ್ಕೆ ಬೇಕಾದ ಕೆಲಸಗಳಷ್ಟೇ ನಡೆಯುತ್ತಿವೆ ಎಂದು ಟೀಕಿಸಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss