ಮುಂಬೈ:ಭಾರತದ ಕೊರೊನಾ ವೈರಸ್ ವಿರುದ್ಧದ ಸಮರಕ್ಕೆ ಪ್ರಧಾನಿ ಮೋದಿ ಅವರೇ ಕ್ಯಾಪ್ಟನ್ ಎಂಬುದಾಗಿ ಶಿವಸೇನೆ ರಾಜ್ಯಸಭಾ ಸಂಸದ ಸಂಜಯ್ ರಾವತ್ ಹೇಳಿದ್ದಾರೆ.
ಅವರು ಬುಧವಾರ ಇಲ್ಲಿ ಸರ್ವಪಕ್ಷ ಸಭೆಯ ಬಳಿಕ ಮಾತನಾಡಿ ಈ ಸಮರದಲ್ಲಿ ಮೋದಿ ನಮ್ಮೆಲ್ಲರ ಸಂಡನಾಯಕ ಎಂಬುದನ್ನು ಸರ್ವಪಕ್ಷಗಳೂ ಒಪ್ಪಿಕೊಂಡಿವೆ. ಈ ಮಾರಕ ವೈರಾಣುವನ್ನು ದೇಶದಿಂದ ಒದ್ದೊಡಿಸಲು ನಾವೆಲ್ಲರೂ ಒಗ್ಗಟ್ಟಾಗಿ ಕೆಲಸ ಮಾಡಬೇಕಾಗಿದೆ ಎಂಬುದಾಗಿ ಅವರು ನುಡಿದರು.