ಕಾಸರಗೋಡು: ಕೊರೋನಾ ಎಂಬ ಸಾಂಕ್ರಾಮಿಕ ರೋಗವನ್ನು ಬಗ್ಗು ಬಡಿದ ನಂತರ ಮುಂದೆ ಎದುರಾಗುವ ಯಾವುದೇ ಬಿಕ್ಕಟ್ಟನ್ನು ಎದುರಿಸಲು ರಾಜ್ಯ ಸಿದ್ಧವಾಗಿದೆ. ಈ ನಿಟ್ಟಿನಲ್ಲಿ ಸರಕಾರಕ್ಕೆ ಇನ್ನಷ್ಟು ಬಲ ಬಂದಿದೆ ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ತಿರುವನಂತಪುರದಲ್ಲಿ ತಿಳಿಸಿದ್ದಾರೆ.
ಕೊರೋನಾ ರೋಗವನ್ನು ಹೋಗಲಾಡಿಸಲು ಕೇರಳ ರಾಜ್ಯ ಹೊಸ ಮಾರ್ಗ ಕಂಡು ಕೊಂಡಿದೆ. ಕೇರಳದಲ್ಲಿ ವರದಿಯಾಗುತ್ತಿರುವ ಹೆಚ್ಚಿನ ಪ್ರಕರಣಗಳು ರಾಜ್ಯದ ಹೊರಗಿನಿಂದ ಬಂದ ವ್ಯಕ್ತಿಗಳಲ್ಲಾಗಿದೆ ಎಂದು ಅವರು ಹೇಳಿದ್ದಾರೆ.
ನಾವು ರೋಗಕ್ಕೆ ಹೆದರಿ ದೂರ ಓಡಬಾರದು. ಈ ಮಣ್ಣು ಎಲ್ಲರಿಗೂ ಸೇರಿದ್ದು ಎಂದು ಸಿಎಂ ನುಡಿದರು.
ಕೇರಳಕ್ಕೆ ವಿದೇಶಗಳಿಂದ ಹಿಂದಿರುಗಿದವರ ಪ್ರಶ್ನೆಗಳಿಗೆ ಟ್ವಿಟ್ಟರ್ ನಲ್ಲಿ ಉತ್ತರಿಸಿದ ಅವರು, ಉದ್ಯೋಗದ ಸಮಸ್ಯೆ , ಮುಂಬರುವ ಮುಂಗಾರು ಮತ್ತು ಹವಾಮಾನ ಬದಲಾವಣೆ ಸೇರಿದಂತೆ ಹಲವು ವಿಷಯಗಳ ಬಗ್ಗೆ ಸಮಗ್ರ ಸಮಾಲೋಚನೆ ನಡೆಸಿದರು.