Monday, August 15, 2022

Latest Posts

ಕೊರೋನಾ ವಿರುದ್ಧ ಹೋರಾಟಕ್ಕೆ ಭಗವದ್ಗೀತೆ ಸ್ಫೂರ್ತಿ: ಆಕ್ಸ್ ಫರ್ಡ್ ವಿವಿ

ಹೊಸದಿಲ್ಲಿ : ಮನುಷ್ಯನ ಎಲ್ಲ ಸಮಸ್ಯೆಗೆ ಭಗವದ್ಗೀತೆಯಲ್ಲಿ ಉತ್ತರವಿದೆ ಎಂಬ ಮಾತಿದೆ. ಅದರಂತೆ ಕುರುಕ್ಷೇತ್ರ ಸನ್ನಿವೇಷವನ್ನು ಕೊರೋನಾ ಬಿಕ್ಕಟ್ಟಿಗೆ ಹೋಲಿಸಲಾಗಿದೆ. ಅಲ್ಲದೇ ಕೊರೋನಾ ವಿರುದ್ಧ ಹಗಲು ರಾತ್ರಿ ಶ್ರಮಿಸುತ್ತಿರುವ ವೈದ್ಯರನ್ನು ಮಹಾಭಾರತದ ಅರ್ಜುನನಿಗೆ ಹೋಲಿಸಲಾಗಿದೆ. ಇತ್ತೀಚೆಗಷ್ಟೇ ಆಕ್ಸ್ ಫರ್ಡ್ ವಿಶ್ವವಿದ್ಯಾಲಯ ದಿ ಯುರೋಪಿಯನ್ ಜರ್ನಲ್ನಲ್ಲಿ ಪ್ರಕಟಿಸಿದ ಲೇಖನದಲ್ಲಿ ಕೊರೋನಾ ಬಿಕ್ಕಟ್ಟಿನ ವಿರುದ್ಧ ಹೋರಾಡಲು ಭಗವದ್ಗೀತೆಯೇ ಸ್ಫೂರ್ತಿ ಎಂದು ಉಲ್ಲೇಖಿಸಲಾಗಿದೆ.
ಸುಮಾರು 5,000ವರ್ಷ ಹಳೆಯ ಭಗವದ್ಗೀತೆ ಈಗಲೂ ಪ್ರಸ್ತುತವಾಗಿದೆ. ಕುರುಕ್ಷೇತ್ರ ಯುದ್ಧಭೂಮಿ ಆಸ್ಪತ್ರೆಗಳಾಗಿದ್ದರೆ ಕೊನೆವರೆಗೂ ಧರ್ಮಕ್ಕಾಗಿ ಹೋರಾಡಿದ ಅರ್ಜುನ ವೈದ್ಯರಿದ್ದಂತೆ. ಒಬ್ಬ ವ್ಯಕ್ತಿ ಹೇಗೆ ಪರಿಪೂರ್ಣ ಜೀವನ ನಿರ್ವಹಿಸಬೇಕೆಂಬುದನ್ನು ಭಗವದ್ಗೀತೆ ತಿಳಿಸುತ್ತದೆ ಎಂದು ಲೇಖನದಲ್ಲಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss