Friday, July 1, 2022

Latest Posts

ಕೊರೋನಾ ವಿರುದ್ಧ ಹೋರಾಟದಲ್ಲಿ ಆರೋಗ್ಯ ಇಲಾಖೆಯ ಶ್ರಮ‌ ಪ್ರಶಂಸನೀಯ

ಹೊಸ ದಿಗಂತ ವರದಿ, ಶಿವಮೊಗ್ಗ:

ಕೊರೋನಾ ವಿರುದ್ಧ ಹೋರಾಟದಲ್ಲಿ ಆರೋಗ್ಯ ಇಲಾಖೆಯ ಎಲ್ಲಾ ವೃಂದಗಳೂ ಸಮರೋಪಾದಿಯಲ್ಲಿ ಸಮರ್ಪಣಾ ಭಾವದಿಂದ ಮಾದರಿಯಾಗುವಂತೆ ಕರ್ತವ್ಯ ನಿರ್ವಹಿಸಿವೆ. ಅವರೆಲ್ಲರ ಶ್ರಮ‌ ನಿಜಕ್ಕೂ ಪ್ರಶಂಸನೀಯ ಎಂದು ಆರೋಗ್ಯ ಇಲಾಖಾ ನೌಕರರ ಸಂಘದ ಜಿಲ್ಲಾಧ್ಯಕ್ಷ ಮಸ ನಂಜುಂಡಸ್ವಾಮಿ‌ ತಿಳಿಸಿದರು.
ತೀರ್ಥಹಳ್ಳಿ ಸರ್ಕಾರಿ ನೌಕರರ ಭವನದಲ್ಲಿ ರಾಜ್ಯ ಮೆಡಿಕಲ್ ಲ್ಯಾಬ್ ಟೆಕ್ನಾಲಜಿಸ್ಟ್ ಸಂಘ ಹಾಗೂ ಶಿವಮೊಗ್ಗ ಜಿಲ್ಲಾ ಸರ್ಕಾರಿ ಲ್ಯಾಬ್ ಟೆಕ್ನಾಲಜಿಸ್ಟ್ ಸಂಘದ ಆಶ್ರಯದಲ್ಲಿ ತಾಲ್ಲೂಕಿನ ಕೊರೋನಾ ವಾರಿಯರ್ಸ್ ಲ್ಯಾಬ್ ಟೆಕ್ನಾಲಜಿಸ್ಟ್ ಗಳಿಗೆ ಅಭಿನಂದನಾ ಸಮಾರಂಭ ಉದ್ಘಾಟಿಸಿ  ಮಾತನಾಡುತ್ತ , ಕಿರಿಯರು ಹಿರಿಯರಿಗೆ ಗೌರವ ಕೊಡಬೇಕು ಅದೇ ರೀತಿ ಹಿರಿಯರು ತಮ್ಮ‌ ಅನುಭವಗಳನ್ನು ಕಿರಿಯರಿಗೆ ತಿಳಿಸಿಕೊಡಬೇಕು. ಎಲ್ಲಾ ವೃಂದಗಳೂ ಮೇಲರಿಮೆ ಕೀಳರಿಮೆ ತೊರೆದು ಪರಸ್ಪರ ಗೌರವದಿಂದ ಕಾಣುವ ಮೂಲಕ ಸಮನ್ವಯತೆ ಕಾಪಾಡಿ ಕೊಳ್ಳಬೇಕು. ಸಾರ್ವಜನಿಕರಿಗೆ ಉತ್ತಮ ಆರೋಗ್ಯ ಸೇವೆ ದೊರಕಿಸಲು ಸಮನ್ವಯತೆ ಬಹಳ ಮುಖ್ಯ ಎಂದರು.
ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಅಶೋಕ್ , ಖಾಸಗಿ ಲ್ಯಾಬ್ ಟೆಕ್ನಾಲಜಿಸ್ಟ್ ಸಂಘದ ಜಿಲ್ಲಾಧ್ಯಕ್ಷ ಜಗದೀಶ್ ,ಸರ್ಕಾರಿ ನೌಕರರ ಸಂಘ ತೀರ್ಥಹಳ್ಳಿ ಶಾಖೆಯ ಅಧ್ಯಕ್ಷ ಟಿ.ವಿ. ಸತೀಶ ಉಪಸ್ಥಿತರಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss