ಕೊರೋನಾ ವಿರುದ್ಧ ಹೋರಾಡಲು ಭಾರತಕ್ಕೆ ಚೀನಾ ಸಾಥ್: ಭಾರತ ವೃರಸ್ ವಿರುದ್ಧ ಜಯ ಗಳಿಸಲಿದೆ

0
112

ಹೊಸದಿಲ್ಲಿ: ವಿಶ್ವಕ್ಕೆಲ್ಲಾ ಕೊರೋನಾ ಸೋಂಕನ್ನು ಹರಿದುಬಿಟ್ಟಿರುವ ಚೀನಾ, ಭಾರತದೊಂದಿಗೆ ಗಡಿ ವಿವಾದಕ್ಕೆ ಮುಂದಾಗುವ ನಾ ಇದೀಗ ಭಾರತದ ಜೊತೆ ಕೈಜೋಡಿಸುವುದಾಗಿ ಘೋಷಿಸಿದೆ.

ಈಗಾಗಲೇ ಸಹಜ ಸ್ಥಿತಿಗೆ ಮರಳುತ್ತಿರುವ ಚೀನಾ ಕೊರೋನಾ ವಿರುದ್ಧ ಹೋರಾಡಲು ಭಾರತ ಮತ್ತು ಇಟಲಿ ದೇಶಗಳ ನೆರವಿಗೆ ಬರುವುದಾಗಿ ಘೋಷಿಸಿದೆ. ಚೀನಾ ತನ್ನ ಸಾಮರ್ಥ್ಯಕ್ಕಿಂತಲೂ ಹೆಚ್ಚಿನ ಬೆಂಬಲವನ್ನು ಭಾರತಕ್ಕೆ ನೀಡಕು ಮುಂದಾಗಿದೆ ಎಂದು ಚೀನಾದಲ್ಲಿರುವ ಭಾರತದ ರಾಯಭಾರಿ ಕಚೇರಿ ಅಧಿಕಾರಿ ಜೀ.ರೊಂಗ್ ಅವರು ಮಾಹಿತಿ ನೀಡಿದ್ದಾರೆ.

ವೈರಸ್ ವಿರುದ್ಧದ ಭಾರತ ಆರಂಭದಲ್ಲಿಯೇ ಜಯ ಗಳಿಸಲಿದೆ. ವೈರಸ್ ತಡೆಗಟ್ಟಲು ಹೋರಾಟ ನಡೆಸುತ್ತಿರುವ ಭಾರತ ಹಾಗೂ ಇನ್ನಿತರೆ ರಾಷ್ಟ್ರಗಳಿಗೆ ಬೆಂಬಲ ನೀಡುವುದಾಗಿ ತಿಳಿಸಿದ್ದಾರೆ.

ಕಷ್ಟದ ಪರಿಸ್ಥಿತಿಯಲ್ಲಿದ್ದಾಗ ಭಾರತ ಚೀನಾಕ್ಕೆ ವೈದ್ಯಕೀಯ ಬೆಂಬಲವನ್ನು ನೀಡಿತ್ತು. ನೆರವು ನೀಡಿದ್ದಕ್ಕೆ ಧನ್ಯವಾದಗಳು ಹಾಗೂ ನಾವು ಭಾರತವನ್ನು ಪ್ರಶಂಸಿಸುತ್ತೇವೆ ಎಂದು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here