Monday, August 8, 2022

Latest Posts

ಕೊರೋನಾ ವೇಳೆ ತಾಯ್ನಾಡಿಗೆ ವಾಪಸ್ ಬಂದ ಅನಿವಾಸಿ ಭಾರತೀಯರ ಸಂಖ್ಯೆ ತಿಳಿಸಿದ ವಿದೇಶಾಂಗ ಸಚಿವಾಲಯ

ಹೊಸದಿಲ್ಲಿ: ವೀಶ್ವದಲ್ಲಿ ಕೊರೋನಾ ಸೋಂಕಿನ ಬಿಕ್ಕಟ್ಟಿನ ನಡುವೆ ಜಗತ್ತಿನಾದ್ಯಂತ ನೆಲೆಸಿದ್ದ 14 ಲಕ್ಷಕ್ಕೂ ಅಧಿಕ ಭಾರತೀಯರನ್ನು ವಾಪಸ್ ಕರೆತರಲಾಗಿದೆ ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ.

ವಂದೇ ಭಾರತ್ ಮಿಷನ್ ಅಡಿಯಲ್ಲಿ ಭಾರತದಲ್ಲಿ ಮರಳಿ ಬಂದ ನಾಗರೀಕರಲ್ಲಿ 56,874 ವಿದ್ಯಾರ್ಥಿಗಳಿದ್ದಾರೆ ಎಂದು  ವಿದೇಶಾಂಗ ಸಚಿವಾಲಯದ ಕಾರ್ಯದರ್ಶಿ ವಿ ಮುರಳೀಧರನ್ ಹೇಳಿದರು.

ಈ ವೇಳೆ ಭಾರತಕ್ಕೆ ಬಂದ 3,248 ಮಂದಿಗೆ ಕೊರೋನಾ ಸೋಂಕು ತಗುಲಿತ್ತು. ಭಾರತೀಯ ಸಮುದಾಯ ಕಲ್ಯಾಣ ನಿಧಿಯಿಂದ ತೊಂದರೆಯಲ್ಲಿರುವ 62,000 ಭಾರತೀಯ ಪ್ರಜೆಗಳಿಗೆ ವಿದೇಶಗಳಲ್ಲಿನ ಭಾರತೀಯ ಮಿಷನ್‌ಗಳು ಸಹಾಯ ಮಾಡಿವೆ ಎಂದು ತಿಳಿಸಿದರು.

ಕೊರೋನಾ ಸಾಂಕ್ರಾಮಿಕ ರೋಗ ಹರಡದಂತೆ ಮುಂಗಾರು ಅಧಿವೇಶನದಲ್ಲಿ  ವಿದೇಶಾಂಗ ಸಚಿವಾಲಯದ ಕಾರ್ಯದರ್ಶಿ ವಿ ಮುರಳೀಧರನ್ ಅವರು ತಿಳಿಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss