Monday, July 4, 2022

Latest Posts

ಕೊರೋನಾ ವೈರಸ್ ಕಣ್ಮರೆಯಾಗಲಿದೆ: ಡೊನಾಲ್ಡ್ ಟ್ರಂಪ್

ವಾಷಿಂಗ್ಟನ್: ಶ್ವೇತಭವನದ ಬಾಲ್ಕನಿಯಲ್ಲಿ ನಿಂತು ಸಾರ್ವಜನಿಕರನ್ನುದ್ದೇಶಿಸಿ ಮಾತನಾಡಿದ ಅಮೆರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಾನು ಆರೋಗ್ಯವಾಗಿದ್ದು, ಚೀನಾ ವೈರಸ್ ಕಣ್ಮರೆಯಾಗಲಿದೆ ಎಂದು ಹೇಳಿದರು.

ಅವರು ಶನಿವಾರ ಮಾಸ್ಕ್ ಧರಿಸದೆ ಶ್ವೇತಭವನದ ಬಾಲ್ಕನಿಯಲ್ಲಿ ನಿಂತು ಸಾರ್ವಜನಿಕರನ್ನುದ್ದೇಶಿಸಿ 18 ನಿಮಿಷ ಮಾತನಾಡಿದ್ದು, ನಮ್ಮ ರಾಷ್ಟ್ರವು ಚೀನಾ ಮಾರಕ ವೈರನ್ನು ಸೋಲಿಸಲಿದೆ. 210000ಕ್ಕೂ ಹೆಚ್ಚು ಅಮೆರಿಕದ ಜನರ ಸಾವಿಗೆ ಕಾರಣವಾಗಿರುವ ಕೋವಿಡ್-19 ಸೋಂಕು ಮಾಯವಾಗಲಿದೆ. ಈಗೆಯೇ ಸೋಂಕು ಇಲ್ಲವಾಗುತ್ತಿದೆ ಎಂದು ಅತೀವ ವಿಶ್ವಾಸದಲ್ಲಿ ಹೇಳಿದರು.

ಒಂಬತ್ತು ದಿನಗಳ ಹಿಂದೆ ಕೋವಿಡ್ -19 ಫಾಸಿಟಿವ್ ನಿಂದಾಗಿ ಪ್ರಚಾರವನ್ನು ನಿಲ್ಲಿಸಿದ್ದ ಟ್ರಂಪ್ ಮತ್ತೆ ಮತ್ತೆ ಪ್ರಚಾರ ನಡೆಸಲು ದಿನಗಳನ್ನು ಕಾಯುತ್ತಿದ್ದು, ಶನಿವಾರ ಪ್ರಚಾರದ ರೀತಿಯಲ್ಲಿಯೇ ಶ್ವೇತಭವನದಲ್ಲಿ ವೇದಿಕೆ ಸಿದ್ಧಪಡಿಸಲಾಗಿತ್ತು. ‘ಹೊರ ಬನ್ನಿ ಮತ್ತು ಮತದಾನ ಮಾಡಿ….ಐ ಲವ್ ಯೂ…’ ಎಂದು ಟ್ರಂಪ್ ನೆರೆದವರಿಗೆ ಹೇಳಿದರು. ಕಾನೂನು ಮತ್ತು ಸುವ್ಯವಸ್ಥೆ ಕುರಿತಾದ ವಿಷಯಗಳನ್ನು ಒಳಗೊಂಡಂತೆ 18 ನಿಮಿಷಗಳ ಭಾಷಣ ಮಾಡಿದರು.

 

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss