ಕೊರೋನಾ ವೈರಸ್ ಕಬಂಧ ಬಾಹುಗಳಲ್ಲಿ ಕೋವಿಡ್-19 ಎಂದರೇನೆಂದೇ ಗೊತ್ತಿಲ್ಲದ 15 ಪುಟಾಣಿಗಳು…

0
201

ಉಡುಪಿ: ಕೊರೋನಾ ವೈರಸ್ ಎಂದರೇನು? ಕೋವಿಡ್-19 ಎಂದರೇನು? ಮಾಸ್ಕ್ ಅಂದರೇನು? ಸ್ಯಾನಿಟೈಸರ್ ಅಂದರೆ ಏನು? ಡಿಸ್ಟೆನ್ಸ್ ಹೇಗೆ ಪಾಲಿಸಬೇಕು… ಇದ್ಯಾವುದರೂ ತಿಳಿಯದಿರುವ ಮುಗ್ಧ ಮಕ್ಕಳೀಗ ಜಿಲ್ಲೆಯಲ್ಲಿ ನೋವೆಲ್ ಕೊರೋನಾ ವೈರಸ್‌ನ ಕಬಂಧ ಬಾಹುಗಳಲ್ಲಿ ಸಿಲುಕಿವೆ.
ಉಡುಪಿ ಜಿಲ್ಲೆಯಲ್ಲಿ ಇಂದು ಒಂದೇ ದಿನ 25 ಮಂದಿಗೆ ಕೋವಿಡ್-19 ಸೋಂಕು ಪಾಸಿಟಿವ್ ಎಂದಾಗ ಉಡುಪಿಗೆ ಆಘಾತ ಆಗಿತ್ತು. ಅದಕ್ಕೂ ಹೆಚ್ಚು ಆಘಾತವಾಗಿರುವುದು ಸೋಂಕಿರ ಪಟ್ಟಿಯಲ್ಲಿ ಬರೋಬ್ಬರಿ 15 ಮಂದಿ ಮಕ್ಕಳಿರುವುದು. ಒಂದರಿಂದ 10 ವರ್ಷ ಪ್ರಾಯದೊಳಗಿನ ಮಕ್ಕಳು ಸೋಂಕಿತರ ಪಟ್ಟಿಯಲ್ಲಿದ್ದಾರೆ. ಈ ಎಲ್ಲ ಮಕ್ಕಳು ಮಹಾರಾಷ್ಟ್ರದ ಮುಂಬೈನಿಂದಲೇ ಬಂದವರಾಗಿದ್ದಾರೆ.
ಸೋಂಕಿತ 25 ಮಂದಿ ಗರಿಷ್ಠ 15 ಜನರು ಬೈಂದೂರು ತಾಲೂಕಿನವರಾಗಿದ್ದಾರೆ. ಈ ಪೈಕಿ 9 ಮಂದಿ ಮಕ್ಕಳಿಗೆ ಸೋಂಕು ಅಂಟಿದೆ. ಕುಂದಾಪುರ ತಾಲೂಕಿನಲ್ಲಿ 5 ಜನ ಸೋಂಕಿತರಾಗಿದರೆ, ಅವರಲ್ಲಿ ನಾಲ್ವರು ಮಕ್ಕಳಿದ್ದಾರೆ. ಉಳಿದಂತೆ ಕಾರ್ಕಳದಲ್ಲಿ ಮೂವರು ಸೋಂಕಿತರ ಪೈಕಿ ಇಬ್ಬರು ಪುಟಾಣಿ ಮಕ್ಕಳು.
ಮಕ್ಕಳ ಪೋಷಕರಿಗಿಲ್ಲ ಸೋಂಕು
ಒಂದರ ಹರೆಯದ ಒಂದು ಪುಟಾಣಿ ಇದ್ದರೆ, 2ವರ್ಷ ಪ್ರಾಯದ ಮಕ್ಕಳು ಇಬ್ಬರು. ಮೂರರ ಹರೆಯದ ಒಂದು ಮಗು, 4ರ ಹರೆಯದ ಎರಡು ಮಕ್ಕಳು, 5ವರ್ಷ ಪ್ರಾಯದ ಒಂದು ಮಗು, 6ರ ಹರೆಯದ ನಾಲ್ಕು ಮಕ್ಕಳಿದ್ದಾರೆ. ಒಂದು 7ವರ್ಷ ಪ್ರಾಯ, ಎರಡು 9ವರ್ಷ ಪ್ರಾಯದ ಮಕ್ಕಳಾದರೆ, ಒಂದು 10ರ ಹರೆಯದ ಮಗುವಿಗೆ ಸೋಂಕು ತಗುಲಿದೆ. ಅಚ್ಚರಿಯ ವಿಚಾರ ಏನೆಂದರೆ ಸೋಂಕಿತ ಮಕ್ಕಳ ಪೋಷಕರಿಗೆ ಬಹುತೇಕ ಕೋವಿಡ್-19 ಸೋಂಕು ಬಾಧಿಸಿಲ್ಲ.
ಈ ಮಕ್ಕಳಿಗೆ ಸೋಂಕು ಅಂಟಿದ್ದೆಲ್ಲಿ?
ವಿನಾ ಕಾರಣ ಮಕ್ಕಳನ್ನು ಹೊರಗೆ ಕರೆದೊಯ್ಯಬೇಡಿ, ಹೋದರೂ ಮಾಸ್ಕ್ ಹಾಕಿಸಿ, ವ್ಯಕ್ತಿಗತ ಅಂತರದಲ್ಲಿ ನಿಲ್ಲುವಂತೆ ನೋಡಿಕೊಳ್ಳುವುದು ಪೋಷಕರ ಜವಾಬ್ದಾರಿ. ಆದರೆ ಹೆತ್ತವರೇ ಜವಾಬ್ದಾರಿ ಮರೆತದ್ದು ಈ ಮಹಾಸ್ಪೋಟಕ್ಕೆ ಕಾರಣವಾಗಿದೆ. ಈ ಮಕ್ಕಳಿಗೆ ಮುಂಬೈನಿಂದ ಬರುವಾಗಲೇ ಕೊರೋನಾ ಇತ್ತಾ? ಪ್ರಯಾಣದ ವೇಳೆ ಸೋಂಕು ಅಂಟಿಕೊಂಡಿತಾ? ಅಥವಾ ದಿಗ್ಬಂಧನ ಕೇಂದ್ರಗಳಲ್ಲಿಯೇ ಈ ವೈರಸ್ ಹರಡಿತಾ? ಎಂಬುದು ಗೊತ್ತಿಲ್ಲ. ತಾಯಿ ಎದೆಹಾಲು ಕುಡಿಯುವ ಮಕ್ಕಳನ್ನು ಏಕಾಂಗಿಯಾಗಿ ಆಸ್ಪತ್ರೆಯಲ್ಲಿ ನೋಡಿಕೊಳ್ಳುವುದು ಆಗದ ಮಾತು. ಹಾಗಾಗಿ ಅನಿವಾರ್ಯವಾಗಿ ಪೋಷಕನ್ನೂ ಕೋವಿಡ್ ಆಸ್ಪತ್ರೆಯೊಳಗೆ ಬಿಟ್ಟುಕೊಳ್ಳಬೇಕಾಗಿದೆ. ಇದು ಇನ್ನಷ್ಟು ಆತಂಕದ ವಿಚಾರವಾಗಿದೆ.

LEAVE A REPLY

Please enter your comment!
Please enter your name here