ಕೊರೋನಾ ವೈರಸ್ ಗೆ ಏರ್ ಪೋರ್ಟ್ ಬಂದ್: ಮಾ. 31ರವರೆಗೆ ಸ್ಥಗಿತ

0
75

ಬೆಂಗಳೂರು: ವಿದೇಶಗಳಿಂದ ಬರುವ ಪ್ರಯಾಣಿಕರಿಂದ ದೇಶದಲ್ಲಿ ಕೋರೋನಾ ಸೋಂಕು ಹೆಚ್ಚಾಗುತ್ತಿದ್ದು, ನಗರದ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಾಗರಿಕ ವಿಮಾನಯಾನ ಸೇವೆಯನ್ನು ತಾತ್ಕಾಲಿಕ ಸ್ಥಗಿತಗೊಳಿಸಿದೆ.

ಈ ಹಿನ್ನಲೆಯಲ್ಲಿ ನೆನ್ನೆ ಮಧ್ಯರಾತ್ರಿ 12ರಿಂದ ಮಾ.31ರ ಮಧ್ಯರಾತ್ರಿ 12ರವರೆಗೆ ನಾಗರಿಕ ವಿಮಾನಯಾನ ಸೇವೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದೆ. ಕೊರೋನಾ ಸೋಂಕನ್ನು ತಡೆಗಟ್ಟುವ ಸಲುವಾಗಿ ಮುನ್ನೆಚ್ಚರಿಕಾ ಕ್ರಮವಾಗಿ ಕೇಂದ್ರ ಸರ್ಕಾರದ ಸೂಚನೆ ಮೇರೆಗೆ ಈ ನಿರ್ಣಯಗಳನ್ನು ಕೈಗೊಳ್ಳಲಿದೆ ಎಂದು ನಿಲ್ದಾಣದ ಮೂಲಗಳು ತಿಳಿಸಿವೆ.

ಕಾರ್ಗೋ ವಿಮಾನ ಸೇವೆಯೂ ಔಷಧ ಸೇರಿದಂತೆ ಅನೇಕ ವಸ್ತುಗಳ ಸಾಗಾಣಿಕೆಯ ಸೇವೆ ಮುಂದುವರೆಸಲಿದೆ ಎಂದು ಬಿ.ಐ.ಎ.ಎಲ್ ಅಧಿಕಾರಿಗಳು ತಿಳಿಸಿದ್ದಾರೆ.

ಏ.1ರಿಂದ ಸೇವೆಯನ್ನು ಪುನಃ ಪ್ರಾರಂಭಿಸಲು ಚಿಂತಿಸಿದ್ದು, ಏರ್ ಏಷಿಯಾ ಮಾ. 23ರ ಮುಂಚಿತವಾಗಿ ಬುಕ್ ಮಾಡಿರುವಂತಹ ಪ್ರಯಾಣಿಕರಿಗೆ ಅಕ್ಟೋಬರ್ ವರೆಗೂ ಸೇವೆಯನ್ನು ವಿಸ್ತರಿಸಲು ಅವಕಾಶ ನೀಡಿದ್ದು, ಇಂಡಿಗೋ ತನ್ನ ಗ್ರಾಹಕರಿಗೆ ಸೆಪ್ಟೆಂಬರ್ ವರೆಗೂ ವಿಸ್ತರಿಸಲಾಗಿದೆ.

LEAVE A REPLY

Please enter your comment!
Please enter your name here