ಕೊರೋನಾ ವೈರಸ್ ನಿಂದ ರಾಜ್ಯ ಸಭಾ ಚುನಾವಣೆ ಮುಂದೂಡಿಕೆ: ಚುನಾವಣಾ ಆಯೋಗ

0
72

ಹೊಸದಿಲ್ಲಿ: ದೇಶದಲ್ಲಿ ಹರಡುತ್ತಿರುವ ಕೊರೋನಾ ವೈರಸ್ ಭೀತಿ ಹಿನ್ನಲೆಯಲ್ಲಿ ರಾಜ್ಯ ಸಭೆಯ ಚುನಾವಣೆಯನ್ನು ಕೇಂದ್ರ ಚುನಾವಣಾ ಆಯೋಗ ಮುಂದೂಡಿದೆ.

ಗುರುವಾರ ಮಾ.26ರಂದು ರಾಜ್ಯ ಸಭಾ ಚುನಾವಣೆ ನಡೆಯಬೇಕಿತ್ತು. ಮುಂದಿನ ದಿನಾಂಕವನ್ನು ಮಾ.31ರ ಬಳಿಕ ಘೋಷಿಸಲಾಗುವುದು ಎಂದು ಚುನಾವಣಾ ಆಯೋಗ ಸ್ಪಷ್ಟನೆ ನೀಡಿದೆ.

ಕೊರೋನಾ ವೈರಸ್ ಹರಡುತ್ತಿರುವ ಕಾರಣ ದೇಶದಲ್ಲಿ ಹಲವಾರು ಜಿಲ್ಲೆಗಳನ್ನು ಸಂಪೂರ್ಣ ಲಾಕ್ ಡೌನ್ ಮಾಡಲಾಗಿದೆ. ಈ ಸಂದರ್ಭದಲ್ಲಿ ವಿವಿಧ ರಾಜ್ಯಗಳ ಒಟ್ಟು 18 ರಾಜ್ಯಸಭಾ ಸ್ಥಾನಗಳ ಚುನಾವಣೆಯ ಅಭ್ಯರ್ಥಿಗಳು, ಅಭ್ಯರ್ಥಿಗಳು ಶಾಸಕರನ್ನು ಒಂದೆಡೆ ಸೇರಿಸುವುದು ಉಚಿತವಲ್ಲ. ಆದ್ದರಿಂದ ಚುನಾವಣೆಯನ್ನು ಮುಂದೂಡಲಾಗಿದೆ ಎಂದು ಚುನಾವಣ ಆಯೋಗ ತಿಳಿಸಿದೆ.

 

LEAVE A REPLY

Please enter your comment!
Please enter your name here