Thursday, June 30, 2022

Latest Posts

ಕೊರೋನಾ ವೈರಸ್ ನ ಮೂಲ ಚೀನಾ ಅಲ್ಲ, ಸಿಂಗಾಪುರ..!

ಬೀಜಿಂಗ್: ಜಗತ್ತಿನಲ್ಲಿ ರುದ್ರತಾಂಡವ ನಡೆಸುತ್ತಿರುವ ಕೊರೋನಾ ವೈರಸ್ ಮೂಲ ಸಿಂಗಾಪುರ ಎಂದು ದ ಗಾರ್ಡಿಯನ್ ಪತ್ರಿಕೆಯ ತನಿಖಾ ವರದಿ ತಿಳಿಸಿದೆ.

2019ರಲ್ಲಿ ಸಿಂಗಾಪುರಕ್ಕೆ ಭೇಟಿ ನೀಡಿದ್ದ ಲಂಡನ್ ಮೂಲದ, 50 ವರ್ಷದ ಉದ್ಯಮಿಯೊಬ್ಬರಿಂದ ಈ ವೈರಸ್ ಸೋಂಕು ಮೂರು ದೇಶಗಳಲ್ಲಿನ 11 ಜನರಿಗೆ ಹರಡಿತ್ತು. ಸಿಂಗಾಪುರದಲ್ಲಿ 2019ರ ಫೆ.20 ರಿಂದ 21ರವರೆಗೆ ನಡೆದಿದ್ದ ವ್ಯಾಪಾರ-ವ್ಯವಹಾರಕ್ಕೆ ಸಂಬಂಧಿಸಿದ ಸಮ್ಮೇಳನದಲ್ಲಿ ಆ ಉದ್ಯಮಿ ಭಾಗವಹಿಸಿದ್ದರು. ಸುಮಾರು ನೂರಕ್ಕಿಂತಲೂ ಹೆಚ್ಚು ಜನರು ಭಾಗವಹಿಸಿದ್ದ ಸಮ್ಮೇಳನದಲ್ಲಿ ಅವರಿಗೆ ಸೋಂಕು ತಗುಲಿತ್ತು. ಆ ಉದ್ಯಮಿಯೇ ಕೊರೋನಾ ವೈರಸ್ ನ  ಮೊದಲ ಸೋಂಕಿತರು ಎಂದು ವರದಿಯಲ್ಲಿ ತಿಳಿಸಲಾಗಿದೆ.

ಅಲ್ಲಿಂದ ಮೂರು ದೇಶಗಳಿಗೆ ತೆರಳಿದ್ದ ಆ ಉದ್ಯಮಿಯಿಂದಲೇ ಕೊರೋನಾ ಸೋಂಕು ಫ್ರಾನ್ಸ್ ಮತ್ತಿತರ ದೇಶಗಳಿಗೆ ಹರಡಿತು. ಆ ಉದ್ಯಮಿ ಈಗ ಲಂಡನ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ದ ಗಾರ್ಡಿಯನ್ ಪತ್ರಿಕೆ ತಿಳಿಸಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss