ಕೊರೋನಾ ವೈರಸ್ ವಿರುದ್ಧ ಹೋರಾಟಕ್ಕಾಗಿ ಪ್ರಧಾನಮಂತ್ರಿ ನಿಧಿಗೆ ಬ್ರಾಹ್ಮಣಸಂಘದಿಂದ 2 ಲಕ್ಷ ರೂ. ದೇಣಿಗೆ

0
108

ಮೈಸೂರು: ಮಹಾಮಾರಿ ಕೊರೋನಾ ಮುಕ್ತ ಹೋರಾಟ ಬೆಂಬಲಿಸಿ ಪ್ರಧಾನಮಂತ್ರಿಗಳ ಪರಿಹಾರ ನಿಧಿಗೆ ಮೈಸೂರು ಜಿಲ್ಲಾ ಬ್ರಾಹ್ಮಣ ಸಂಘದಿಂದ 2ಲಕ್ಷ ರೂ ದೇಣಿಗೆ ನೀಡಲಾಗಿದೆ.

ಬುಧವಾರ ನಗರದ ನಜರಬಾದ್ ಸರ್ಕಾರಿ ಅತಿಥಿ ಗೃಹದಲ್ಲಿ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣರನ್ನು ಭೇಟಿ ಮಾಡಿದ ಮೈಸೂರು ಬ್ರಾಹ್ಮಣ ಸಂಘದ ಅಧ್ಯಕ್ಷ ಡಿ.ಟಿ. ಪ್ರಕಾಶ್ ಅವರು 2ಲಕ್ಷ ರೂ ಚೆಕ್‌ ನೀಡಿದರು. ಬಳಿಕ  ಮಾತನಾಡಿ ಕೊರೋನಾ ಸೊಂಕು ತಡೆಗಟ್ಟಲು ಪ್ರತಿಯೊಬ್ಬರು ತಮ್ಮ ಮನೆಯಲ್ಲಿರಬೇಕು. ನಿರ್ಗತಿಕರಿಗೆ, ಬಡವರಿಗೆ ಅವಶ್ಯಕವಿರುವವರಿಗೆ ಅನ್ನದಾಸೋಹ ಮತ್ತು ದಿನಸಿ ಪದಾರ್ಥ ವೈದ್ಯಕೀಯ ನೆರವು ಮನೆಬಾಗಿಲಿಗೆ ನೀಡಲಾಗುವುದು.

ಪ್ರತಿಯೊಬ್ಬರು ಮಾನವೀಯತೆಯ ಸೇವಾ ಮನೋಭಾವದೊಂದಿಗೆ,  ತಮ್ಮ ಮನೆಯ ಸುತ್ತಮುತ್ತವಿರುವ ಅಶಕ್ತರಿಗೆ ಆರೋಗ್ಯ ಮತ್ತು ಆಹಾರ ಸಮಸ್ಯೆ ಬಗೆಹರಿಸಿ, ಮಾನಸಿಕ ಧೈರ್ಯ ತುಂಬಲು ಮುಂದಾಗಬೇಕು ಎಂದು ಹೇಳಿದರು.

ಈ ವೇಳೆ ಬಿಜೆಪಿ ಮೈಸೂರು ಪ್ರಭಾರಿ ಮೈ.ವಿ.ರವಿಶಂಕರ್, ಬಿಜೆಪಿ ನಗರಾಧ್ಯಕ್ಷರಾದ ಶ್ರೀವತ್ಸ, ಪ್ರಧಾನಕಾರ್ಯದರ್ಶಿ ಹೆಚ್.ಜಿ ಗಿರಿಧರ್ ಮತ್ತಿತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here