ಉಡುಪಿ: ನೋವೆಲ್ ಕೊರೋನಾ ವೈರಸ್ ಸೋಂಕು ಹರಡುತ್ತಿರುವುದನ್ನು ತಡೆಗಟ್ಟುವುದಕ್ಕಾಗಿ ಉಡುಪಿ ನಗರದಲ್ಲಿ ಸೋಂಕು ನಿವಾರಕ (ಡಿಸ್ಇನ್ಫೆಕ್ಟೆಂಟ್) ರಾಸಾಯನಿಕವನ್ನು ಸಿಂಪಡಿಸಲಾಗುತ್ತಿದೆ. ಉಡುಪಿ ನಗರಸಭೆ ಮತ್ತು ಅಗ್ನಿಶಾಮಕ ದಳದಿಂದ ಶನಿವಾರ ಜಂಟಿ ಕಾರ್ಯಾಚರಣೆ ಪ್ರಾರಂಭಗೊಂಡಿದೆ.
ಉಡುಪಿ ನಗರಸಭೆ ಕಚೇರಿ ಕಟ್ಟಡದ ಮುಂಭಾಗದಲ್ಲಿ ಸೋಂಕು ನಿವಾರಕ ರಾಸಾಯನಿಕ ಸಿಂಪಡಣೆಗೆ ಚಾಲನೆ ನೀಡಲಾಗಿದ್ದು, ಮೊದಲ ದಿನ ನಗರದ ಪ್ರಮುಖ ಸ್ಥಳಗಳಲ್ಲಿ ಸಿಂಪಡಣೆ ನಡೆಸಲಾಗಿದೆ.
ಹೆಚ್ಚು ಜನ ಓಡಾಡುವ-ಸೇರುವ ಸ್ಥಳದಲ್ಲಿ
ಮೊದಲ ಹಂತದಲ್ಲಿ ಅತೀ ಹೆಚ್ಚು ಜನರು ಓಡಾಡುವ ಮತ್ತು ಸೇರುವ ಸ್ಥಳಗಳಲ್ಲಿ, ರಸ್ತೆ, ಕಟ್ಟಡಗಳು ಸಹಿತ ಎಲ್ಲೆಡೆ ಸಿಂಪಡಿಸಲಾಗುತ್ತಿದೆ. ಶನಿವಾರ ಕವಿ ಮುದ್ದಣ ಮಾರ್ಗ, ಸೂಪರ್ ಬಝಾರ್ ಪ್ರದೇಶ, ನಗರಸಭೆ, ತ್ರಿವೇಣಿ ವೃತ್ತ, ಕೆಎಸ್ಆರ್ಟಿಸಿ ಬಸ್ಸು ನಿಲ್ದಾಣ, ಸರ್ವಿಸ್ ಬಸ್ಸು ನಿಲ್ದಾಣ, ಸಿಟಿ ಬಸ್ಸು ನಿಲ್ದಾಣ, ಕಿದಿಯೂರು ಹೊಟೇಲ್ ಮುಂಭಾಗ, ಕಲ್ಸಂಕ, ಕೃಷ್ಣಮಠದ ಪಾರ್ಕಿಂಗ್ ಪ್ರದೇಶ ಹಾಗೂ ಕೃಷ್ಣಮಠದ ಆಸುಪಾಸು ಪ್ರದೇಶಗಳಲ್ಲಿ ಸೋಂಕು ನಿವಾರಕ ರಾಸಾಯನಿಕವನ್ನು ಸಿಂಪಡಿಸಲಾಗಿದೆ.
ಮೂರು ದಿನಗಳಿಗೊಮ್ಮೆ ನಿರಂತರ ಸ್ಪ್ರೇ
ಜಿಲ್ಲಾಧಿಕಾರಿ ಅವರ ನಿರ್ದೇಶನದಂತೆ ಅಗ್ನಿಶಾಮಕದಳ ಜಂಟಿಯಾಗಿ ಕಾರ್ಯಾಚರಣೆ ನಡೆಸುತ್ತಿದ್ದೇವೆ. ಉಡುಪಿ ನಗರಸಭೆಯ 35 ವಾರ್ಡ್ಗಳಲ್ಲಿ ಪ್ರತಿಯೊಂದು ವಾರ್ಡ್ನಲ್ಲಿಯೂ ಸೋಂಕು ನಿವಾರಕ ರಾಸಾಯನಿಕವನ್ನು ಸಿಂಪಡಿಸಲಾಗುತ್ತದೆ. ಮಾ. 30ರಂದು ಮಣಿಪಾಲ, ಪರ್ಕಳ, ಮಲ್ಪೆಘಿ, ಸಂತೆಕಟ್ಟೆ ಮುಂತಾದ ಸ್ಥಳಗಳಲ್ಲಿ ಸಿಂಪಡಣೆ ನಡೆಯಲಿದೆ. ಕೋವಿಡ್ -19 ಸೋಂಕು ಹರಡುವುದನ್ನು ತಡೆಗಟ್ಟಲು ಉಡುಪಿ ನಗರ ವ್ಯಾಪ್ತಿಯಲ್ಲಿ ಪ್ರತೀ ಮೂರು ದಿನಗಳೊಮ್ಮೆ ನಿರಂತರವಾಗಿ ಡಿಸ್ಇನ್ಫೆಕ್ಟೆಂಟ್ ಕೆಮಿಕಲ್ ಸ್ಪ್ರೇ ಮಾಡುತ್ತೇವೆ ಎಂದು ನಗರಸಭೆಯ ಪೌರಾಯುಕ್ತ ಆನಂದ ಸಿ. ಕಲ್ಲೋಳಿಕರ್ ತಿಳಿಸಿದ್ದಾರೆ.

ಮುಂಜಾಗ್ರತಾ ಕ್ರಮ ಅನುಸರಿಸಿದರೆ ಸುರಕ್ಷಿತ
ಕೋವಿಡ್-19 ಸೋಂಕು ವ್ಯಾಪಕವಾಗಿ ಹರಡುತ್ತಿದೆ. ಅದರ ಮುಂಜಾಗ್ರತಾ ಕ್ರಮವಾಗಿ ಹರಡುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ನಗರಸಭೆ ಮತ್ತು ಅಗ್ನಿಶಾಮಕ ದಳ ಇಲಾಖೆಯ ಸಹಯೋಗದೊಂದಿಗೆ ಸೋಂಕು ನಿವಾರಕ ರಾಸಾಯನಿಕವನ್ನು ಸಿಂಪಡಿಸಲಾಗುತ್ತಿದೆ. ಇದನ್ನು ಸಿಂಪಡಿಸುವುದರಿಂದ ವೈರಸ್ ಹರಡುವುದು ಸ್ವಲ್ಪ ಮಟ್ಟಿಗಾದರೂ ನಿಯಂತ್ರಣಕ್ಕೆ ಬರುತ್ತದೆ ಎನ್ನುವ ವಿಶ್ವಾಸವಿದೆ. ಜನರಿಗೆ ಯಾವುದೇ ರೀತಿಯ ಭಯ ಬೇಡ. ಮುಂಜಾಗ್ರತಾ ಕ್ರಮಗಳನ್ನು ಅನುಸರಿಸಿ ಮನೆಯಲ್ಲಿಯೇ ಇರಿ, ಆರೋಗ್ಯವಾಗಿರಿ ಎಂದು ಅಗ್ನಿಶಾಮಕ ದಳದ ಮುಖ್ಯಸ್ಥ ವಸಂತಕುಮಾರ್ ಹೇಳಿದ್ದಾರೆ.