Wednesday, July 6, 2022

Latest Posts

ಕೊರೋನಾ ವೈರಸ್ ಹಾವಳಿಗೆ ಕಡಿವಾಣ ಹಾಕಲು ಫೀಲ್ಡಿಗೆ ಇಳಿದ ಮೈಸೂರು ಜಿಲ್ಲಾಡಳಿತ!

ಎಸ್.ಮಹೇಶ್
ಮೈಸೂರು: ಜಿಲ್ಲೆಯಲ್ಲಿ ಕೊರೋನಾ ವೈರಸ್ ಹಾವಳಿಗೆ ಕಡಿವಾಣ ಹಾಕಲು ಜಿಲ್ಲಾಡಳಿತ ಇದೀಗ ಕಾರ್ಯಚರಣೆಗೆ ಇಳಿದಿದೆ. ಆ ಮೂಲಕ ಇಡೀ ಜಿಲ್ಲೆಯ ಜನರಲ್ಲಿ ಜ್ವರ, ಕೆಮ್ಮು ಇರುವವರನ್ನು ಪತ್ತೆ ಹಚ್ಚಿ, ಅವರನ್ನು ಪರೀಕ್ಷೆಗೆ ಒಳಪಡಿಸುವುದಕ್ಕಾಗಿ, ಆ ಮೂಲಕ ಕೊರೋನಾ ಸೋಂಕು ಮತ್ತಷ್ಟು ಜನರಿಗೆ ಹರಡುವುದನ್ನು ತಡೆದು, ಇಡೀ ಜಿಲ್ಲೆಯನ್ನು ಕೊರೋನಾ ಸೋಂಕಿನಿ0ದ ಮುಕ್ತ ಮಾಡಲು ಸಂಕಲ್ಪ ಮಾಡಿದೆ. ಜಿಲ್ಲೆಯಲ್ಲಿ ಕೊರೋನಾ ವೈರಸ್ ಹರಡಲು ಕಾರಣವಾಗಿರುವ ನಂಜನಗೂಡು ತಾಲೂಕಿನ ಕಡಕೊಳ ಗ್ರಾಮದಲ್ಲಿರುವ ಜುಬಿಲಿಯಂಟ್ ಔಷಧ ಕಾರ್ಖಾನೆಯ ಕಾರ್ಮಿಕರ ಸೋಂಕಿನ ಚೈನ್ ಲಿಂಕ್‌ನ್ನು ವಿಶೇಷ ಪ್ರಕರಣವೆಂದು ಪರಿಗಣಿಸಿದ್ದು, ಈ ಚೈನ್ ಲಿಂಕನ್ನೂ ತುಂಡರಿಸಲು ಕಾರ್ಯಚರಣೆಯನ್ನು ಭಾನುವಾರದಿಂದ ಆರಂಭಿಸಿದೆ.
960 ತಂಡಗಳಿ0ದ ಕಾರ್ಯಚರಣೆ 
ಕೊರೋನಾ ಹರಡುವಿಕೆಯನ್ನು ತಡೆಗಟ್ಟುವ ನಿಟ್ಟಿನಲ್ಲಿ 961 ತಂಡಗಳನ್ನು ರಚಿಸಲಾಗಿದ್ದು, ಈ ತಂಡಗಳು ನಗರ ಪ್ರದೇಶಗಳಲ್ಲಿ ಸೋಂಕಿತರನ್ನು ಪತ್ತೆ ಹಚ್ಚುವ ಕೆಲಸವನ್ನು ಮಾಡುತ್ತಿವೆ. ಈ ತಂಡದಲ್ಲಿ ಆಶಾ ಕಾರ್ಯಕರ್ತೆರು, ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕರು, ಹಾಗೂ ಸ್ಥಳೀಯ ಆರೋಗ್ಯಾಧಿಕಾರಿಗಳು, ಸಹಾಯಕರು ಇದ್ದಾರೆ. ಈ ತಂಡಗಳು ಈಗಾಗಲೇ ೪೧,೫೫೭ ಮನೆಗಳ ತಪಾಸಣೆಯನ್ನು ನಡೆಸಿದ್ದು, ಇವರಲ್ಲಿ ೭೧ ಮಂದಿಗೆ ಕೆಮ್ಮು, ಜ್ವರ, ನೆಗಡಿಯ ಲಕ್ಷಣಗಳಿದ್ದ ಕಾರಣ, ಅವರು ಆರೋಗ್ಯ ತಪಾಸಣೆಯನ್ನು ನಡೆಸಲಾಗುತ್ತಿದೆ. ಇವರಿಗೆ ಕೊರೋನಾ ಸೋಂಕಿನ ಲಕ್ಷಣವಿದೆ ಎಂದು ವೈದ್ಯರು ಪರೀಕ್ಷೆ ನಡೆಸಲು ಸೂಚಿಸಿದರೆ, ಆಗ ಅವರುಗಳನ್ನು ಸ್ಕಿನಿಂಗ್‌ಗೆ ಒಳಪಡಿಸಿ, ರಕ್ತ, ಗಂಟಲಿನ ದ್ರವ ಮಾದರಿಯನ್ನು ಸಂಗ್ರಹಿಸಿ, ಪರೀಕ್ಷೆ ನಡೆಸಲಾಗುತ್ತದೆ.
ಫೀವರ್ ಕ್ಲಿನಿಕ್‌ಗಳ ಆರಂಭ
ಕೊರೋನಾ ವೈರಸ್ ಹರಡುವಿಕೆಯನ್ನು ತಡೆಯುವ ನಿಟ್ಟಿನಲ್ಲಿ ಫೀವರ್ ಕ್ಲೀನಿಕ್‌ಗಳನ್ನು ಇನ್ನೆರಡು ದಿನಗಳಲ್ಲಿ ಜಿಲ್ಲಾಡಳಿತ ಆರಂಭಿಸಲಿದೆ. ಎಲ್ಲೆಲ್ಲಿ ಈಗಾಗಲೇ ಸೋಂಕಿತರು ಇದ್ದಾರೆಯೋ ಆ ಪ್ರದೇಶಗಳಲ್ಲಿನ ಜನರ ಆರೋಗ್ಯ ಪರೀಕ್ಷೆಯನ್ನು ಈ ಕ್ಲಿನಿಕ್‌ಗಳ ಮೂಲಕ ನಡೆಸಲಾಗುತ್ತದೆ. ಅಲ್ಲದೆ ಸೋಂಕಿತರು ಇಲ್ಲದ ಪ್ರದೇಶಗಳಲ್ಲಿಯೂ ಫೀವರ್ ಕ್ಲಿನಿಕ್‌ಗಳನ್ನು ಸ್ಥಾಪಿಸಲಾಗುತ್ತದೆ. ಯಾರಿಗೆ ಜ್ವರ, ಕೆಮ್ಮು, ನೆಗಡಿ ಮುಂತಾದವು ಇದೆಯೋ, ಅವರಿಗೆ ಈ ಕ್ಲೀನಿಕ್‌ಗಳಿಗೆ ಹೋಗಿ ತಪಾಸಣೆ ಮಾಡಿಸಿಕೊಳ್ಳಲು ಚೀಟಿಯನ್ನು ಬರೆದುಕೊಡಲಾಗುತ್ತದೆ. ಅಲ್ಲಿ ಹೋಗಿ ಪರೀಕ್ಷೆ ಮಾಡಿಸಿಕೊಳ್ಳಬಹುದು. ಚಿಕಿತ್ಸೆ ಪಡೆಯಬಹದು. ಒಂದು ವೇಳೆ ಕೊರೋನಾ ಸೋಂಕಿನ ಲಕ್ಷಣಗಳಿರುವುದು ಕಂಡು ಬಂದರೆ, ಅಂತಹವರನ್ನು ಸ್ಕಿನಿಂಗ್‌ಗೆ ಒಳಪಡಿಸಲಾಗುತ್ತದೆ. ಅಲ್ಲದೆ ಅವರ ಮಾದರಿಯನ್ನು ಸಂಗ್ರಹಿಸಿ ಪರೀಕ್ಷೆಗೆ ಒಳಪಡಿಸಲಾಗುತ್ತದೆ. ಸೋಂಕಿರುವುದು ಕಂಡು ಬಂದರೆ, ಮೈಸೂರಿನ ಕೋವಿಡ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಈ ರೀತಿ ಫೀವರ್ ಕ್ಲೀನಿಕ್ ಮೂಲಕ ಇಡೀ ಜಿಲ್ಲೆಯಲ್ಲಿ ಕೊರೋನಾ ಸೋಂಕಿತರನ್ನು ಅತಿ ಶೀಘ್ರವಾಗಿ ಪತ್ತೆ ಹಚ್ಚುವ ಪ್ರಯತ್ನ ನಡೆಸಲಾಗುತ್ತದೆ.
ಪ್ರಾಥಮಿಕ ಸಂಪರ್ಕ ಹೊಂದಿದ್ದವರ ಪತ್ತೆ : ಜಿಲ್ಲೆಯಲ್ಲಿ ಈಗಾಗಲೇ ಕೊರೋನಾ ಸೋಂಕಿತರ ಪ್ರಾಥಮಿಕ ಸಂಪರ್ಕದಲ್ಲಿದ್ದವರನ್ನು ಪತ್ತೆ ಹಚ್ಚುವ ಕಾರ್ಯವನ್ನು ಶೇ ೯೦ಕ್ಕೂ ಹೆಚ್ಚು ಪೂರ್ಣಗೊಳಿಸಲಾಗಿದೆ. ಇನ್ನೇರಡು ದಿನಗಳಲ್ಲಿ ಈ ಕಾರ್ಯ ಪೂರ್ಣಗೊಳ್ಳಲಿದೆ. ಈ ಪ್ರಾಥಮಿಕ ಸಂಪರ್ಕ ಹೊಂದಿದ್ದವರೊAದಿಗೆ ಸೆಕಂಡರಿ ಸಂಪರ್ಕ ಹೊಂದಿದ್ದವರಲ್ಲೂ ಕೊರೋನಾ ಸೋಂಕು ಕಾಣಿಸಿಕೊಳ್ಳುತ್ತಿರುವ ಹಿನ್ನಲೆಯಲ್ಲಿ ಸೆಕಂಡರಿ ಸಂಪರ್ಕ ಹೊಂದಿದ್ದವರನ್ನು ಪತ್ತೆ ಹಚ್ಚಿ, ಅವರನ್ನೂ ಕೂಡ ಕೊರೋನಾ ಸೋಂಕಿನ ಪರೀಕ್ಷೆಗೆ ಒಳಪಡಿಸಲು ತೀರ್ಮಾನಿಸಲಾಗಿದೆ. ಸುಮಾರು ೮೦೦ ಮಂದಿಗೂ ಹೆಚ್ಚು ಜನರು ಸೆಕಂಡರಿ ಸಂಪರ್ಕ ಹೊಂದಿದ್ದವರನ್ನು ಪತ್ತೆ ಹಚ್ಚಲಾಗಿದ್ದು, ಇವರೆಲ್ಲೂ ನಂಜನಗೂಡು ತಾಲೂಕಿನ ಕಡಕೊಳ ಗ್ರಾಮದಲ್ಲಿರುವ ಜುಬಿಲಿಯಂಟ್ ಔಷಧ ಕಾರ್ಖಾನೆಯ ಸೋಂಕಿತ ಕಾರ್ಮಿಕರೊಂದಿಗೆ ಪ್ರಾಥಮಿಕ ಸಂಪರ್ಕ ಹೊಂದಿದ್ದವರೊAದಿಗೆ ಸಂಪರ್ಕಕ್ಕೆ ಬಂದಿದ್ದವರು. ಇವರನ್ನೆಲ್ಲಾ ಕೂಡ ಹೋಂ ಕ್ವಾರಂಟೈನ್‌ಗೆ ಒಳಪಡಿಸಲು ಭಾನುವಾರದಿಂದ ಕಾರ್ಯಚರಣೆಯನ್ನು ಆರಂಭಿಸಲಾಗಿದೆ.
ವಿಶೇಷ ಪ್ರಕರಣವೆಂದು ಪರಿಗಣನೆ 
ಜಿಲ್ಲೆಯಲ್ಲಿ ಹೆಚ್ಚು ಕೊರೋನಾ ಸೋಂಕಿನ ಪ್ರಕರಣ ನಡೆದಿರುವುದು ನಂಜನಗೂಡಿನ ಜುಬಿಲಿಯಂಟ್ ಔಷಧ ಕಾರ್ಖಾನೆಯ ಕಾರ್ಮಿಕರಿಂದಲೇ. ಇಲ್ಲಿ ಕಾಣಿಸಿಕೊಂಡಿದ್ದ ಸೋಂಕು ಚೈನ್ ಲಿಂಕ್ ನಂತೆ ಹರಡಿಕೊಂಡಿದ್ದ ಕಾರಣ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಈ ಕಾರ್ಖಾನೆಯಲ್ಲಿ ಇಲ್ಲಿಯ ತನಕ ೩೬ ಮಂದಿಗೆ ಸೋಂಕಿರುವುದು ದೃಢಪಟ್ಟಿದೆ. ಹಾಗಾಗಿ ಈ ಕಾರ್ಖಾನೆಯ ಸೋಂಕಿನ ಪ್ರಕರಣವನ್ನು ವಿಶೇಷವೆಂದು ಪರಿಗಣಿಸಿ, ೧೫೦೦ಕ್ಕೂ ಹೆಚ್ಚು ಕಾರ್ಮಿಕರನ್ನು ಹೋಂ ಕ್ವಾರಂಟೈನ್ ಮಾಡಲಾಗಿದೆ. ಇವರಲ್ಲಿ ಬಹುತೇಕ ಮಂದಿ ಹೋಂ ಕ್ವಾರಂಟೈನ್ ಅವಧಿಯನ್ನು ಪೂರ್ಣಗೊಳಿಸಿದ್ದರೂ, ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಲೇ ಇದ್ದು, ಇದಕ್ಕೆ ಸಂಪೂರ್ಣ ಕಡಿವಾಣ ಹಾಕಲು ಜಿಲ್ಲಾಡಳಿತ ಇದೀಗ ವಿಶೇಷ ಕಾರ್ಯಚರಣೆಯನ್ನು ಪ್ರಾರಂಭಿಸಿದೆ.

ಅಲ್ಲಿ ಹೋಗಿ ಪರೀಕ್ಷೆ ಮಾಡಿಸಿಕೊಳ್ಳಬಹುದು
ಫೀವರ್ ಕ್ಲೀನಿಕ್‌ಗಳನ್ನು ಇನ್ನೆರಡು ದಿನಗಳಲ್ಲಿ ಪ್ರಾರಂಭಿಸಲಾಗುವುದು. ಯಾರಿಗೆ ಜ್ವರ, ಕೆಮ್ಮು, ನೆಗಡಿ ಮುಂತಾದವು ಇದೆಯೋ, ಅವರಿಗೆ ಈ ಕ್ಲೀನಿಕ್‌ಗಳಿಗೆ ಹೋಗಿ ತಪಾಸಣೆ ಮಾಡಿಸಿಕೊಳ್ಳಲು ಚೀಟಿಯನ್ನು ಬರೆದುಕೊಡಲಾಗುತ್ತದೆ. ಅಲ್ಲಿ ಹೋಗಿ ಪರೀಕ್ಷೆ ಮಾಡಿಸಿಕೊಳ್ಳಬಹುದು. ಚಿಕಿತ್ಸೆ ಪಡೆಯಬಹದು.
ಅಭಿರಾಮ್ ಜಿ.ಶಂಕರ್, ಜಿಲ್ಲಾಧಿಕಾರಿ, ಮೈಸೂರು

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss