Thursday, August 11, 2022

Latest Posts

ಕೊರೋನಾ ವ್ಯಾಕ್ಸಿನ್​ನ ಮೊದಲ ಡೋಸ್ ಸ್ವೀಕರಿಸಿದ ಗೃಹಸಚಿವ ಅಮಿತ್ ಶಾ

ಹೊಸ ದಿಗಂತ ಆನ್ ಲೈನ್ ಡೆಸ್ಕ್:

ಕೇಂದ್ರ ಗೃಹಸಚಿವ ಅಮಿತ್ ಶಾ ಕೂಡ ಕೊರೋನಾ ವ್ಯಾಕ್ಸಿನ್​ನ ಮೊದಲ ಡೋಸ್ ತೆಗೆದುಕೊಂಡಿದ್ದಾರೆ. ಮೇದಾಂತ ಆಸ್ಪತ್ರೆಯ ವೈದ್ಯರು ಅಮಿತ್ ಶಾ ಅವರಿಗೆ ಕೊರೋನಾ ಲಸಿಕೆ ನೀಡಿದ್ದಾರೆ.
ಇಂದು ಕೇಂದ್ರ ಆರೋಗ್ಯ ಇಲಾಖೆ ಮತ್ತೊಂದು ಸುತ್ತಿನ ವ್ಯಾಕ್ಸಿನೇಷನ್​ಗೆ ಚಾಲನೆ ನೀಡಿದ್ದು, ಇಂದು ಪ್ರಧಾನಿ ಮೋದಿ ಸೇರಿದಂತೆ ಹಲವು ಕೇಂದ್ರ ನಾಯಕರು ವ್ಯಾಕ್ಸಿನ್ ತೆಗೆದುಕೊಳ್ಳುವ ಮೂಲಕ ಜನರಿಗೆ ವ್ಯಾಕ್ಸಿನ್ ಬಗ್ಗೆ ಭಯ ಬೇಡ ಎಂಬ ಸಂದೇಶ ನೀಡಿದ್ದಾರೆ.
ಇತ್ತ ವಿದೇಶಾಂಗ ಸಚಿವ ಡಾ. ಎಸ್. ಜೈಶಂಕರ್, ರಾಜಸ್ಥಾನ ರಾಜ್ಯಪಾಲರಾದ ಕಲ್​ರಾಜ್ ಮಿಶ್ರಾ ಸೇರಿದಂತೆ ಹಲವು ನಾಯಕರು ಇಂದು ವ್ಯಾಕ್ಸಿನ್​ನ ಮೊದಲ ಡೋಸ್ ಪಡೆದುಕೊಂಡರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss