Wednesday, June 29, 2022

Latest Posts

ಕೊರೋನಾ ಶಂಕಿತ 97 ಜನರ ತಪಾಸಣೆ, ನೆಗೆಟಿವ್ ವರದಿ: ಸಚಿವ ಶ್ರೀರಾಮುಲು

ಹಾವೇರಿ: ಕೇರಳದಲ್ಲಿ ಕೊರೋನಾ ಸೋಂಕಿತ ಪ್ರಕರಣಗಳು ಪತ್ತೆಯಾದ ಹಿನ್ನೆಲೆಯಲ್ಲಿ ರಾಜ್ಯದ ಕರಾವಳಿ, ಬಂದರು ಹಾಗೂ ವಿಮಾನ ನಿಲ್ದಾಣಗಳಲ್ಲಿ ಅಗತ್ಯ ಮುಂಜಾಗೃತ ಕ್ರಮಗಳನ್ನೂ ಕೈಗೊಳ್ಳಲಾಗಿದೆ ಎಂದು ಆರೋಗ್ಯ ಸಚಿವ ಶ್ರೀರಾಮುಲು ತಿಳಿಸಿದ್ದಾರೆ.

ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿಮಾನ ನಿಲ್ದಾಣ, ಕರಾವಳಿ ಪ್ರದೇಶ ಹಾಗೂ ಬಂದರುಗಳಲ್ಲಿಒಟ್ಟು97 ಜನರನ್ನು ರಕ್ತ ಪರೀಕ್ಷೆಗೆ ಒಳಪಡಿಸಿದ್ದು, ಎಲ್ಲವೂ ನೆಗೆಟಿವ್ ಬಂದಿದೆ. ಕೇರಳದಿಂದ ರಾಜ್ಯಕ್ಕೆ ಆಗಮಿಸುವ ಜನರ ತಪಾಸಣೆಯೂ ನಡೆಸಲಾಗುತ್ತಿದೆ. ಆರೋಗ್ಯ ಇಲಾಖೆ ಕೊರೋನಾ ಹರಡದಂತೆ ಎಲ್ಲ ರೀತಿಯ ಅಗತ್ಯ ಕ್ರಮ ಕೈಗೊಳ್ಳಲಾಗುತ್ತಿದ್ದು, ಜನರು ಭಯಪಡುವ ಅಗತ್ಯವಿಲ್ಲ ಎಂದು ಹೇಳಿದರು.

15 ಜಿಲ್ಲೆಗಳಿಗೆ ನೀಡಲಾಗಿರುವ ಆರೋಗ್ಯ ಸೇವೆಯ ಮೊಬೈಲ್ ಎಲ್ ಇಡಿ ವಾಹನಗಳನ್ನು ಮುಂದಿನ ತಿಂಗಳು ಎಲ್ಲ ಜಿಲ್ಲೆಗಳಿಗೂ ನೀಡಲಾಗುವುದು ಎಂದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss