Saturday, August 13, 2022

Latest Posts

ಕೊರೋನಾ ಸಂಕಷ್ಟದ ವಿರುದ್ಧ ಭಾರತದ ಹೋರಾಟಕ್ಕೆ ಬೆಂಬಲ ಸೂಚಿಸಿ ಆಸ್ಟ್ರೇಲಿಯಾ ವಿವಿಯಲ್ಲಿ ಬೆಳಗಿದ ತ್ರಿವರ್ಣ ಧ್ವಜ!

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
……………………………………

ಹೊಸದಿಗಂತ ಆನ್ ಲೈನ್ ಡೆಸ್ಕ್:

ಕೊರೋನಾ ಸಂಕಷ್ಟದ ವಿರುದ್ಧ ಭಾರತದ ಹೋರಾಟಕ್ಕೆ ವಿಶ್ವವೇ ಸಾಥ್ ನೀಡಿದ್ದು, ಆಸ್ಟ್ರೇಲಿಯಾ ಕೂಡ ತನ್ನ ಬೆಂಬಲವನ್ನು ವ್ಯಕ್ತಪಡಿಸಿದೆ.
ಭಾರತದ ಈ ಹೋರಾಟಕ್ಕೆ ಆಸ್ಟ್ರೇಲಿಯಾ ವಿಶ್ವವಿದ್ಯಾಲಯ ಯುಎನ್‌ಎಸ್​ಡಬ್ಲೂದ ಮುಖ್ಯ ಲೈಬ್ರರಿ ಟವರ್​​ನಲ್ಲಿ ತ್ರಿವರ್ಣ ಧ್ವಜದ ಬಣ್ಣದ ದೀಪಗಳನ್ನ ಬೆಳಗುವ ಮೂಲಕ ಭಾರತೀಯ ವಿದ್ಯಾರ್ಥಿಗಳು ಹಾಗೂ ಸ್ನೇಹಿತರು ಮತ್ತು ವಿಶ್ವದಲ್ಲಿ ಕೋವಿಡ್​​ನಿಂದ ಬಳಲುತ್ತಿರುವವರಿಗೆ ಬೆಂಬಲ ಸೂಚಿಸಿದೆ.
ಈ ಫೋಟೋವನ್ನ ಟ್ವಿಟರ್​ನಲ್ಲಿ ಆಸ್ಟ್ರೇಲಿಯಾ ಯುನಿವರ್ಸಿಟಿ ಶೇರ್​ ಮಾಡಿದೆ. ಈ ಫೋಟೋದಲ್ಲಿ ಕಟ್ಟಡವನ್ನ ತ್ರಿವರ್ಣ ದೀಪದಲ್ಲಿ ಬೆಳಗುತ್ತಿರೋದ್ರ ಜೊತೆಗೆಕೊರೋನಾದಿಂದ ಬಳಲುತ್ತಿರುವ ಭಾರತ ಸೇರಿದಂತೆ ಎಲ್ಲರೂ ಸದೃಢವಾಗಿರಿ ಎಂದು ಬರೆದಿದೆ.
‘ನಮ್ಮ ಭಾರತೀಯ ವಿದ್ಯಾರ್ಥಿಗಳು ಹಾಗೂ ಸ್ನೇಹಿತರು ಮತ್ತು ವಿಶ್ವದಲ್ಲಿ ಕೊರೋನಾದಿಂದ ತತ್ತರಿಸಿರುವ ಎಲ್ಲರಿಗೂ ಬೆಂಬಲ ಸೂಚಿಸುವ ಸಲುವಾಗಿ ನಮ್ಮ ಲೈಬ್ರರಿ ಟವರ್​ನಲ್ಲಿ ತ್ರಿವರ್ಣ ದೀಪಗಳನ್ನ ಬೆಳಗಿದ್ದೇವೆ. ನೀವೆಲ್ಲರೂ ಸುರಕ್ಷಿತವಾಗಿ, ಆರೋಗ್ಯವಂತರಾಗಿ, ಸದೃಢರಾಗಿ ಇರುತ್ತೀರಾ ಎಂದು ಭಾವಿಸಿದ್ದೇವೆ’ ಎಂದು ಟ್ವಿಟರ್​ನಲ್ಲಿ ಬರೆಯಲಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss