Saturday, July 2, 2022

Latest Posts

ಕೊರೋನಾ ಸಂಕಷ್ಟ: ಗಣೇಶೋತ್ಸವ ಆಚರಣೆ ಹೇಗೆ?

ಆಪತ್ಕಾಲೀನ ಪರಿಸ್ಥಿತಿಯ ಹಿನ್ನೆಲೆಯಲ್ಲಿ ಹಿಂದೂ ಧರ್ಮಶಾಸ್ತ್ರದಲ್ಲಿ ಹೇಳಿರುವ ಪರ್ಯಾಯವೆಂದರೆ ‘ಆಪದ್ಧಧರ್ಮ! : ‘ಸದ್ಯ ಜಗತ್ತಿನಾದ್ಯಂತ ಕೊರೋನಾ ಮಹಾಮಾರಿಯಿಂದಾಗಿ ಎಲ್ಲೆಡೆ ಜನರ ಸಂಚಾರಕ್ಕೆ ಅನೇಕ ನಿರ್ಬಂಧಗಳಿವೆ. ಭಾರತದಲ್ಲಿಯೂ ವಿವಿಧ ರಾಜ್ಯಗಳಲ್ಲಿ ಸಂಚಾರಸಾರಿಗೆಗೆ ನಿಷೇಧವಿದೆ. ಇದರಿಂದ ಹಿಂದೂಗಳ ವಿವಿಧ ಹಬ್ಬ, ಉತ್ಸವ ಮತ್ತು ವ್ರತಗಳನ್ನು ಎಂದಿನಂತೆ ಸಾಮೂಹಿಕ ರೀತಿಯಲ್ಲಿ ಆಚರಿಸಲು ಕಷ್ಟವಾಗಿದೆ.ಕೊರೋನಾದಂತಹ ಆಪತ್ಕಾಲದ ಹಿನ್ನೆಲೆಯಲ್ಲಿ ಹಿಂದೂ ಧರ್ಮವು ಧರ್ಮಾಚರಣೆಯಲ್ಲಿ ಕೆಲವು ಪರ್ಯಾಯಗಳನ್ನು ಹೇಳಿದೆ. ಇದನ್ನೇ ‘ಆಪದ್ಧರ್ಮ ಎಂದು ಹೇಳುತ್ತಾರೆ.‘ಆಪದ್ಧರ್ಮ ಕರ್ತವ್ಯೋ ಧರ್ಮಃ | ಅಂದರೆ ‘ ಆಪತ್ಕಾಲದಲ್ಲಿ ಧರ್ಮಶಾಸ್ತ್ರದಲ್ಲಿ ಮಾನ್ಯತೆಯಿರುವ ಕೃತಿಗಳಲ್ಲಿ ಹೇಳಲಾದಂತೆ,ಪರ್ಯಾಯ ರೀತಿಯಲ್ಲಿ ನಡೆದುಕೊಳ್ಳಬೇಕು. ಇದೀಗ ಶ್ರೀ ಗಣೇಶಚತುರ್ಥಿಯ ವ್ರತ ಮತ್ತು ಗಣೇಶೋತ್ಸವ ಬರುತ್ತಿರುವುದರಿಂದ ಸಾಮೂಹಿಕ ಆಚರಣೆ ಕಷ್ಟಸಾಧ್ಯ.ಈ ಹಿನ್ನೆಲೆಯಲ್ಲಿ “ಆಪದ್ಧರ್ಮ”ದ ಸಂದೇಶ ನೋಡಬೇಕು.ಇಲ್ಲಿ ಮಹತ್ವದ ವಿಷಯವೆಂದರೆ, ಹಿಂದೂ ಧರ್ಮವು ಯಾವ ಮಟ್ಟದವರೆಗೆ ಹೋಗಿ ಮಾನವನ ವಿಚಾರವನ್ನು ಮಾಡಿದೆ ಎಂಬುದು ವ್ಯಕ್ತವಾಗುತ್ತದೆ. ಇದರಿಂದಲೇ ಹಿಂದು ಧರ್ಮ ಎಂಬುದು ಮಾನವ ಧರ್ಮವೆನಿಸಿದೆ.
ಗಣೇಶ ಚತುರ್ಥಿಯ ವ್ರತವನ್ನು ಹೇಗೆ ಆಚರಿಸಬೇಕು ? : ಗಣೇಶೋತ್ಸವವು ಹಿಂದೂಗಳ ಒಂದು ದೊಡ್ಡ ಹಬ್ಬವಾಗಿದೆ. ಶ್ರೀ ಗಣೇಶೋತ್ಸವದ ದಿನಗಳಲ್ಲಿ ಗಣೇಶತತ್ತ್ವವು ನಿತ್ಯದ ತುಲನೆಯಲ್ಲಿ ಪೃಥ್ವಿಯ ಮೇಲೆ ಸಾವಿರಪಟ್ಟು ಹೆಚ್ಚು ಕಾರ್ಯನಿರತವಾಗಿರುತ್ತದೆ. ಸದ್ಯ ಕೊರೋನಾ ವೈರಾಣುವಿನ ಹಾವಳಿ ದಿನದಿಂದ ದಿನಕ್ಕೆ ದೊಡ್ಡ ಪ್ರಮಾಣದಲ್ಲಿ ಹೆಚ್ಚುತ್ತಿದೆ. ಈ ಹಿನ್ನೆಲೆಯಲ್ಲಿ ಆಪದ್ಧರ್ಮ ಮತ್ತು ಧರ್ಮಶಾಸ್ತ್ರಗಳನ್ನು ಜೊತೆಗೂಡಿಸಿ ದೃಶ್ಯಾವಳಿ, ದೀಪಾಲಂಕಾರ ಇತ್ಯಾದಿಗಳನ್ನು ಮಾಡದೇ ಸರಳವಾಗಿ ಮಣ್ಣಿನ ಸಿದ್ಧಿವಿನಾಯಕನ ವ್ರತವನ್ನು ಮಾಡಬಹುದಾಗಿದೆ.
ಜನರು ತಮಗೆ ಗಣೇಶತತ್ತ್ವದ ಲಾಭವಾಗಬೇಕೆಂದು ಅಪೇಕ್ಷಿಸುತ್ತಿದ್ದರೆ, ತಮ್ಮ ಮನೆಯಲ್ಲಿನ ಗಣೇಶನ ಮೂರ್ತಿ ಅಥವಾ ಗಣೇಶನ ಚಿತ್ರದ ಷೋಡಷೋಪಚಾರ ಪೂಜೆಯನ್ನು ಮಾಡಬೇಕು. ಈ ಪೂಜೆಯನ್ನು ಮಾಡುವಾಗ ಪ್ರಾಣಪ್ರತಿಷ್ಠಾಪನೆ ಈ ವಿಯನ್ನು ಮಾತ್ರ ಮಾಡಬಾರದು.
ಜ್ಯೇಷ್ಠ ಗೌರಿ ವ್ರತವನ್ನು ಯಾವ ರೀತಿ ಮಾಡಬೇಕು ? : ಕೆಲವು ಮನೆಗಳಲ್ಲಿ ಭಾದ್ರಪದ ಶುಕ್ಲ ಪಕ್ಷ ಅಷ್ಟಮಿಯಂದು ಜ್ಯೇಷ್ಠ ಗೌರಿಯ ಪೂಜೆಯನ್ನು ಮಾಡಲಾಗುತ್ತದೆ. ಕೆಲವು ಮನೆಗಳಲ್ಲಿ ಕಲ್ಲುಗಳ ರೂಪದಲ್ಲಿ ಮತ್ತು ಇನ್ನು ಕೆಲವು ಮನೆಗಳಲ್ಲಿ ಮುಖವಾಡಗಳನ್ನು ಮಾಡಿ ಅವುಗಳನ್ನು ಪೂಜಿಸಲಾಗುತ್ತದೆ. ಈ ಬಾರಿ ಅವರು ತಮ್ಮ ಮನೆಯಲ್ಲಿನ ಯಾವುದಾದರೂಂದು ದೇವಿಯ ಮೂರ್ತಿಯ ಅಥವಾ ದೇವಿಯ ಚಿತ್ರದ ಪೂಜೆಯನ್ನು ಮಾಡಬೇಕು.
ಗಣೇಶಮೂರ್ತಿಯನ್ನು ತರುವಾಗ, ಹಾಗೆಯೇ ಮೂರ್ತಿಯ ವಿಸರ್ಜನೆಯನ್ನು ಮಾಡುವಾಗ ಮನೆಯ ಕೆಲವೇ ವ್ಯಕ್ತಿಗಳು ಹೋಗಬೇಕು. ಮೂರ್ತಿಯ ವಿಸರ್ಜನೆ ಮಾಡುವಾಗ ತಮ್ಮ ಮನೆಯ ಹತ್ತಿರದ ಕೆರೆ ಅಥವಾ ಬಾವಿಯಲ್ಲಿ ವಿಸರ್ಜನೆ ಮಾಡಬೇಕು. ಈ ಸಮಯದಲ್ಲಿ ಜನಜಂಗುಳಿಯಾಗುವ ಅಪಾಯ ಹೆಚ್ಚಿರುವುದರಿಂದ ಕೊರೋನಾ ಸಂದರ್ಭದಲ್ಲಿ ಸರಕಾರವು ಹೇಳಿರುವ ಮಾರ್ಗದರ್ಶಕ ಅಂಶಗಳನ್ನು ಚಾಚುತಪ್ಪದೇ ಪಾಲಿಸುವುದು ನಮ್ಮೆಲ್ಲರ ಆದ್ಯಕರ್ತವ್ಯವೇ ಆಗಿದೆ.
ಗಣೇಶಮೂರ್ತಿಯು ಏಕೆ ಜೇಡಿಮಣ್ಣಿನದ್ದಾಗಿರಬೇಕು?, ಈ ವಿಷಯದಲ್ಲಿನ ಧರ್ಮಶಾಸ್ತ್ರದ ಸಂದರ್ಭ : ‘ಧರ್ಮಶಾಸ್ತ್ರಾನುಸಾರ ಜೇಡಿಮಣ್ಣಿನ ಮೂರ್ತಿಯನ್ನು ಪೂಜಿಸಿದರೆ, ಅದರಿಂದ ಆಧ್ಯಾತ್ಮಿಕ ಸ್ತರದಲ್ಲಿ ಅತ್ಯಕ ಲಾಭವಾಗುತ್ತದೆ ಎಂದು ಹಿಂದೂಗಳ ಧರ್ಮಶಾಸ್ತ್ರೀಯ ಗ್ರಂಥಗಳಲ್ಲಿ ಹೇಳಲಾಗಿದೆ.‘ಧರ್ಮಸಿಂಧುವಿನಲ್ಲಿ ಗಣೇಶಚತುರ್ಥಿಗೆ ಗಣಪತಿಯ ಮೂರ್ತಿ ಹೇಗಿರಬೇಕು ಎಂಬುದನ್ನು ತಿಳಿಸಲಾಗಿದೆ.ತತ್ರ ಮೃಣ್ಮಯಾದಿಮೂರ್ತೌ ಪ್ರಾಣಪ್ರತಿಷ್ಠಾಪೂರ್ವಕಂ ವಿನಾಯಕಂ ಷೋಡಷೋಪಚಾರೈಃ ಸಂಪೂಜ್ಯ! ( ಧರ್ಮಸಿಂಧು, ಪರಿಚ್ಛೇದ ೨)ಅರ್ಥ: ಈ ದಿನ (ಭಾದ್ರಪದ ಶುಕ್ಲ ಪಕ್ಷ ಚತುರ್ಥಿಯ ದಿನ) ಜೇಡಿ ಮಣ್ಣು ಇತ್ಯಾದಿಗಳಿಂದ ತಯಾರಿಸಿದ ಶ್ರೀ ಗಣೇಶನ ಮೂರ್ತಿಯ ಪ್ರಾಣಪ್ರತಿಷ್ಠೆಯೊಂದಿಗೆ ಸ್ಥಾಪನೆಯನ್ನು ಮಾಡಿ ಷೋಡಷೋಪಚಾರ ಪೂಜೆಯನ್ನು ಮಾಡಿ….
‘ಸ್ಮೃತಿಕೌಸ್ತುಭ ’ ಧರ್ಮಗ್ರಂಥದಲ್ಲಿ ಶ್ರೀಕೃಷ್ಣನು ಧರ್ಮರಾಜನಿಗೆ ಸಿದ್ಧಿವಿನಾಯಕನ ವ್ರತವನ್ನು ಮಾಡುವುದರ ಬಗೆಗೆ ಉಪದೇಶಿಸಿದ ಉಲ್ಲೇಖವಿದೆ. ಇದರಲ್ಲಿ ‘ಮೂರ್ತಿ ಹೇಗಿರಬೇಕು ?, ಎಂಬುದರ ಸವಿಸ್ತಾರ ವರ್ಣನೆ ಬಂದಿದೆ.
ಸ್ವಶಕ್ತ್ಯಾ ಗಣನಾಥಸ್ಯ ಸ್ವರ್ಣರೌಪ್ಯಮಯಾಕೃತಿಮ್||
ಅಥವಾ ಮೃನ್ಮಯಿ ಕಾರ್ಯಾ ವಿತ್ತಶಾಠ್ಯಂ ನ ಕಾರಯೇತ್|| -ಸ್ಮೃತಿಕೌಸ್ತುಭ
ಅರ್ಥ: ಈ (ಸಿದ್ಧಿವಿನಾಯಕನ) ಪೂಜೆಗಾಗಿ ತಮ್ಮ ಕ್ಷಮತೆಗನುಸಾರ ಬಂಗಾರ, ಬೆಳ್ಳಿ ಅಥವಾ ಮಣ್ಣಿನ ಮೂರ್ತಿಯನ್ನು ತಯಾರಿಸಬೇಕು. ಇದರಲ್ಲಿ ಜಿಪುಣತನ ಮಾಡಬಾರದು.ಇದರಲ್ಲಿ ಬಂಗಾರ, ಬೆಳ್ಳಿ ಅಥವಾ ಮಣ್ಣಿನಿಂದಲೇ ಮೂರ್ತಿಯನ್ನು ತಯಾರಿಸಬೇಕು, ಎನ್ನುವ ಸ್ಪಷ್ಟ ಉಲ್ಲೇಖವಿರುವುದರಿಂದ, ಇದನ್ನು ಹೊರತುಪಡಿಸಿ ಇತರ ವಸ್ತುಗಳಿಂದ ಮೂರ್ತಿಯನ್ನು ತಯಾರಿಸುವುದು ಶಾಸ್ತ್ರಾನುಸಾರ ಅಯೋಗ್ಯವಾಗಿದೆ.
ಗಣೇಶ ಪೂಜೆ ಮತ್ತು ಆರತಿ ವಿಧಿಗಳಿಗಾಗಿ ಭೇಟಿ ನೀಡಿ:
Android App : sanatan.org/ganeshapp

Apple iOS App : sanatan.org/iosganeshapp

ಶ್ರೀ. ದಾಮೋದರ ವಝೆ, ಸಂಚಾಲಕರು, ಸನಾತನ ಪುರೋಹಿತ ಪಾಠಶಾಲೆ, ಸನಾತನ ಆಶ್ರಮ, ರಾಮನಾಥಿ, ಗೋವಾ.

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ : ೯೩೪೨೫೯೯೨೯೯

 

 

 

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss