Wednesday, August 17, 2022

Latest Posts

ಕೊರೋನಾ ಸಂದಿಗ್ಧತೆಯಲ್ಲಿ ಸ್ವಾತಂತ್ರ್ಯ ದಿನಾಚರಣೆಯನ್ನು ಸರಳವಾಗಿ ಆಚರಿಸಬೇಕು: ದಂಡಾಧಿಕಾರಿ ನಾಗೇಶ್

ರಾಮನಗರ: ಕೊರೋನಾ ವ್ಯರಸ್ಸ್ ನಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಈ ಭಾರಿಯ 74ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಸರಳವಾಗಿ ಅರ್ಥಗರ್ಬಿತವಾಗಿ ಆಚರಣೆ ಮಾಡುವುದಾಗಿ ನೂತನ ತಾಲ್ಲೂಕು ದಂಡಾಧಿಕಾರಿ ನಾಗೇಶ್ ತಿಳಿಸಿದರು.

ನಗರದ ತಾಲ್ಲೂಕು ಕಚೇರಿಯ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ  ಸ್ವಾತಂತ್ರ್ಯ ದಿನಾಚರಣೆಯ ಸಿದ್ದತೆಯ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.

ಪ್ರತಿಭಾರಿಯಂತೆ ಈ ಭಾರಿ ಅದ್ದೂರಿಯಾಗಿ ಸ್ವಾತಂತ್ರ್ಯ ದಿನಾಚರಣೆ ಮಾಡಲು ಕೊರೋನಾ ವೈರಸ್ ಅಡಚಣೆ ಉಂಟು ಮಾಡಿದ್ದು ಸರ್ಕಾರದ ಸುತ್ತೋಲೆಯಂತೆ ನೀತಿ ನಿಯಮಾನುಸಾರ ಬಹಳ ಎಚರಿಕೆಯಿಂದ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಣೆ ಮಾಡಲು ಪ್ರತಿಯೊಂದು ಇಲಾಖೆ, ವಿವಿಧ ಸಂಘಸ0ಸ್ಥೆಗಳು ಹಾಗೂ ಮಾದ್ಯಮ ಸಹಕಾರ ಅತ್ಯಗತ್ಯವಾಗಿದೆ ಎಂದರು.

ಮಂಡ್ಯ ಹಾಗೂ ಇತರೆ ಕಡಟೆ ದಂಡಾಧಿಕಾರಿಯಾಗಿ ಕರ್ತವ್ಯಪಾಲನೆ ಮಾಡಿದ ನಾನು ತಾಲ್ಲೂಕಿನಲ್ಲಿಯೂ ಸೇವೆ ಸಲ್ಲಿಸಬೇಕೆಂಬ ಮಹತ್ವಾಕಾಂಕ್ಷೆ ಹೊಂದಿದವನಾಗಿದ್ದೆ ಅದರಂತೆ ತಾಲ್ಲೂಕಿಗೆ ದಂಡಾಧಿಕಾರಿಯಾಗಿ ನಿಯೋಜನೆಗೊಂಡಿದ್ದೇನೆ, ಎಲ್ಲರ ಸಹಕಾರ, ಮಾರ್ಗದರ್ಶನದಲ್ಲಿ ಸೇವೆ ಮಾಡುತ್ತೇನೆ ಎಂದು ತಿಳಿಸಿದರು.

ನಿಗಧಿತ ಸ್ಥಳದಲ್ಲಿಯೇ 74ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಣೆ ಮಾಡಲಾಗುತ್ತಿದ್ದು, ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದವರು ಅದರಲ್ಲಿಯೂ ಕೊರೋನಾ-ವಾರಿರ‍್ಸ್ ಆಗಿ ಸೇವೆ ಸಲ್ಲಿಸುತ್ತಿರುವವರಿಗೆ ಅದರಲ್ಲೂ ಜನಮೆಚ್ಚುಗೆ ಪಡೆದವರನ್ನು ಆಯ್ಕೆ ಮಾಡಿ ಸನ್ಮಾನಿಸಲಾಗುವುದು ಎಂದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss

error: Content is protected !!