Saturday, January 23, 2021

Latest Posts

ಕೊರೋನಾ ಸಮಯದಲ್ಲಿ ಎಷ್ಟು ಹುಷಾರಾಗಿ ಇದ್ದರೂ ಕಡಿಮೆಯೇ.. ಈ ಸಮಯದಲ್ಲಿ ಎಂದಿಗೂ ಇಂಥ ತಪ್ಪುಗಳನ್ನು ಮಾಡಬೇಡಿ..

ಕೊರೋನಾ ನಮ್ಮ ನಿದ್ದೆಗೆಡಿಸಿದೆ. ಎಲ್ಲಿ ಏನು ಮುಟ್ಟಿದರೂ ಕೊರೋನಾ ಬಂದುಬಿಟ್ಟೀತು ಎಂಬ ಭಯ. ಅದರಲ್ಲೂ ಈ ರೋಗ ಬಂದರೆ ನಮಗೆ ಅಷ್ಟೆ ಅಲ್ಲ,ನಮ್ಮ ಪ್ರೀತಿ ಪಾತ್ರರಿಗೂ ತೊಂದರೆ.‌ಹಾಗಾಗಿ ನಮಗಾಗಿ ಮತ್ತು ನಮ್ಮ‌ಮನೆಯವರಿಗಾಗಿ ನಾವು ಹುಷಾರಾಗಿ ಇರುವುದು ಅನಿವಾರ್ಯ. ಆದರೆ ಜೀವನ ನಡೆಯಲೇಬೇಕು. ಆಫೀಸಿಗೆ ಹೋಗಲೇಬೇಕು. ನಾವು ಈ ಸಮಯದಲ್ಲಿ ಯಾವ ರೀತಿ ತಪ್ಪುಗಳನ್ನು‌ ಮಾಡುತ್ತಿದ್ದೀವಿ. ಕೊರೋನಾದಿಂದ ದೂರ ಇರಲು ಈ ಕೆಲಸಗಳನ್ನು ಎಂದಿಗೂ ಮಾಡಬೇಡಿ…

  • ಈಗ ಸ್ನೇಹ ಬೇಡ: ನೀವು‌ ಮನೆಯವರೆ ಇರಬಹುದು.‌ಅಥವಾ ನಿಮ್ಮ ಪ್ರೀತಿಯ ಸ್ನೇಹಿತರು ಇರಬಹುದು. ಹಾಗಂತ ಅವರ ಜೊತೆ ಒಂದೇ ತಟ್ಟೆಯಲ್ಲಿ ತಿನ್ನುವುದು, ತುಂಬಾ ಹತ್ತಿರದಲ್ಲಿ ನಿಲ್ಲುವುದು ಇದನ್ನೆಲ್ಲ ಮಾಡಬೇಡಿ. ಕೊರೋನಾ ತಂದುಕೊಳ್ಳುವುದು ಇದರಿಂದ ಸುಲಭವಾದೀತು. ಮನೆಯವರಿಗೆ ಬಂದರೆ ನಮಗೂ ಬರುತ್ತದೆ ಎಂಬ ಉದಾಸೀನ ಬೇಡ. ಅವರ ದೇಹಕ್ಕೆ ಕೊರೋನಾ ಏನೂ ಮಾಡದಿರಬಹುದು. ಆದರೆ ನಿಮಗೆ ಹಾನಿ ಮಾಡಬಹುದು.
  • ರೋಡಿನಲ್ಲಿ ಉಗುಳದಿರಿ: ಕೆಲವರಿಗೆ ರಸ್ತೆ ಮೇಲೆ‌ ಉಗಿಯುವ ಅಭ್ಯಾಸ ಇರುತ್ತದೆ.‌ ಸಿಕ್ಕಸಿಕ್ಕಲ್ಲಿ ಉಗಿಯುವುದು ಬೇಡ.‌ಇದರಿಂದ ಹೆಚ್ಚು ವೈರಸ್ ಹರಡುತ್ತದೆ. ಶೀತ ಜ್ವರದಿಂದ ಬಳಲುತ್ತಿರುವವರಿಂದ ಯಾವಾಗಲೂ ದೂರವಿರಿ.
  • ನಿಮ್ಮದೇ ವಾಹನ ಇರಲಿ:ಎಲ್ಲರ ಬಳಿಯೂ ನಿಮ್ಮದೆ ಸ್ವಂತ ವಾಹನ ಇರದಿರಬಹುದು.‌ಸ್ವಲ್ಪ ಸಮಯದ ಮಟ್ಟಿಗಾದರೂ ಪಬ್ಲಿಕ್ ಟ್ರಾನ್ಸ್‌ಪೋರ್ಟ್‌ ‌ಬಳಸಬೇಡಿ.‌ ಅತಿ ಅವಶ್ಯ ಇದ್ದರೆ ಮಾತ್ರ ಮನೆಯಿಂದ ಹೊರಬನ್ನಿ. ಆದಷ್ಟು ಓಡಾಟ ಕಡಿಮೆ ಮಾಡಿ.
  • ಮೆಡಿಸಿನ್ ಬೇಡ: ಸ್ವಲ್ಪ ಜ್ವರ ಅಥವಾ ಶೀತ ಏನೇ ಕಾಣಿಸಿದರೂ ವೈದ್ಯರ ಬಳಿ ತೋರಿಸಿ. ಸುಮ್ಮನೆ ನೀವೇ ಸೆಲ್ಫ್ ಮೆಡಿಸಿನ್ ಮಾಡಬೇಡಿ. ಇದು ತುಂಬಾ ಮಂದಿ ಮಾಡುತ್ತಾರೆ. ಆಸ್ಪತ್ರೆಗೆ ಹೋದರೆ ಹೇಗೋ ಎನ್ನುವ ಭಯದಿಂದ ಮನೆಯಲ್ಲಿಯೇ ಮೆಡಿಸಿನ್ ಮಾಡುತ್ತಾರೆ. ಅವರಿವರು ಹೇಳಿದ ಮಾತುಗಳನ್ನೂ ಕೇಳುತ್ತಾರೆ. ಎಲ್ಲರ ದೇಹ ಒಂದೇ ರೀತಿ ಇರುವುದಿಲ್ಲ. ಒಬ್ಬರಿಗೆ ಕೊರೋನಾ ಏನೂ ಮಾಡದಿರಬಹುದು. ನಿಮ್ಮ ದೇಹಕ್ಕೆ ಎಫೆಕ್ಟ್ ಆಗಬಹುದು. ಮೆಡಿಸಿನ್ ಮಾಡಬೇಡಿ.
     
  • ಹೆದರಿಕೆ ಬೇಡ: ಮನಸು ಗಟ್ಟಿಯಿರುವವರಿಗೆ ಯಾವುದೇ ರೋಗ ಬಾರದು.‌ ನಾವು ಮೊದಲು ಗಟ್ಟಿಯಾಗಬೇಕು. ಕೊರೋನಾ ಬಂದರೆ ಅದೇನು ದೊಡ್ಡ ವಿಷಯವಲ್ಲ. ಆರೈಕೆ ಮಾಡಿದರೆ ಹುಷಾರಾಗುತ್ತೀವಿ ಎಂಬ ನಂಬಿಕೆ ಇರಲಿ. ಈ ಗಟ್ಟಿ ಮನಸು ಮಾಡುವುದರಿಂದ ರೋಗಗಳು ನಿಮ್ಮ ಬಳಿ ಸುಳಿಯುವುದಿಲ್ಲ.

ಸುದ್ದಿ ಇಷ್ಟವಾಯ್ತಾ, ಇತರರಿಗೂ ಶೇರ್ ಮಾಡಿ, ಓದಿಸಿ.

Whatsapp Group
Telegram

Latest Posts

Don't Miss

error: Content is protected !!