Wednesday, July 6, 2022

Latest Posts

ಕೊರೋನಾ ಸರ್ವಾಂತರ್ಯಾಮಿ ಆಗುವ ಎಚ್ಚರಿಕೆ 

ನ್ಯೂಯಾರ್ಕ್: ಚೀನಾದಲ್ಲಿ  ಕಾಣಿಸಿಕೊಂಡ ಹೊಸ ಕೊರೋನಾ ವೈರಸ್ ಸೋಂಕು ಸರ್ವ ವ್ಯಾಪಿ ವ್ಯಾಧಿಯಾಗಿ ಹರಡುತ್ತಿದೆ. ವ್ಯಾಧಿಯ ತೀವ್ರ ಹಾಗೂ ಗಂಭೀರ ಸ್ಥಿತಿಯನ್ನು ಅರಿತು ಇತರ ದೇಶಗಳಿಗೆ ಥಟ್ಟನೆ ಬೆಳವಣಿಗೆಯಾಗುವ ಅಣಬೆಯಂತಹ ಸೋಂಕು ಆದ ಈ ವ್ಯಾಧಿ ಹಠಾತ್ತನೆ ಕಾಣಿಸಿಕೊಳ್ಳದಂತೆ ವಿಶ್ವದ ದೇಶಗಳು ಭಾರಿ ಮುನ್ನೆಚ್ಚರ ವಹಿಸುವಂತೆ ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಕೆ ನೀಡಿದೆ.

ಕೊರೋನಾ ವೈರಸ್ ಸೋಂಕು ಮಧ್ಯಪ್ರಾಚ್ಯ, ಯುರೋಪ್ ಮತ್ತು ಏಷ್ಯಾದಲ್ಲಿ ಹರಡಿ ಸಾವಿಗೀಡಾದ ಸುದ್ದಿ ಬಂದ ನಂತರ ವಿಶ್ವಸಂಸ್ಥೆ ಮುಂಜಾಗ್ರತೆಗಾಗಿ ಎಲ್ಲ ದೇಶಗಳಿಗೂ ಮನವಿ ಮಾಡಿದೆ. ಕೊರೋನಾ ವೈರಸ್‌ಗೆ ಚೀನಾ ಕೇಂದ್ರ ಸ್ಥಾನವಾಗಿದ್ದರೂ ರಾಷ್ಟ್ರ ವ್ಯಾಪಿಯಾಗಿ ಸೋಂಕು ಹರಡದಂತೆ ಚೀನಾ ಕಟ್ಟುನಿಟ್ಟಿನ ಮುಂಜಾಗ್ರತಾ ಕ್ರಮ ಕೈಗೊಂಡಿದ್ದರಿಂದ ಈಗ ಚೀನಾದಲ್ಲಿ ಸೋಂಕು ಹತೋಟಿಯಲ್ಲಿದೆ ಎಂದು ಡಬ್ಲ್ಯೂಎಚ್‌ಒ ತಿಳಿಸಿದೆ.

ವಿದೇಶಗಳಿಗೆ ಹರಡಿ 2,000ಕ್ಕಿಂತ ಅಧಿಕ ಪ್ರಕರಣಗಳು ಪತ್ತೆಯಾಗಿ 30 ಜನರು ಕೊರೋನಾ ವೈರಸ್‌ಗೆ ಬಲಿಯಾಗಿರುವ ಕಾರಣ ಡಬ್ಲ್ಯೂಎಚ್‌ಒ ಮುಖ್ಯಸ್ಥ ಟೆಡ್ರೋಸ್ ಅಧನಂ ಫೆಬ್ರೇಯಸ್ ಸೋಂಕು ತಗುಲದಂತೆ ಜಾಗರೂಕರಾಗಿರಲು ವಿಶ್ವದ ಎಲ್ಲ ದೇಶಗಳಿಗೂ ಕಿವಿಮಾತನ್ನು ಹೇಳಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss