ನ್ಯೂಯಾರ್ಕ್: ಕೋರೋನಾ ವಿರುದ್ಧದ ಸವಾಲುಗಳನ್ನು ಎದುರಿಸುವಲ್ಲಿ ಧಾರ್ಮಿಕ ನಾಯಕರ ಪಾತ್ರ ಹೆಚ್ಚಿದೆ. ಅವರು ಜನರಿಗೆ ಸಹಾಯ ಮಾಡುವುದರ ಜೊತೆಗೆ ಜೀವನೋಪಾಯವನ್ನು ತಿಳಿಸಿಕೊಡುತ್ತಿದ್ದಾರೆ.ಈ ಕಳಂಕ ದಿಂದ ಹೊರ ಬರಲು ಹೇಳಿಕೊಡುತ್ತಾರೆ.ಎಂದು ಯು.ಎನ್ ನ ಸೆಕ್ರೆಟರಿ ಜನರಲ್ ಆ್ಯಂಟೊನಿಯೋ ಗುಟೆರೆಸ್ ಹೇಳಿದ್ದಾರೆ.
ತಮ್ಮ ಟ್ವಿಟರ್ ಖಾತೆಯಲ್ಲಿ ಈ ವಿಚಾರವನ್ನು ಹಂಚಿಕೊಂಡಿದ್ದು ಕೋವಿಡ್-19 ರನ್ನು ಸೋಲಿಸಿ ಜಗತ್ತಿನಲ್ಲಿ ಮತ್ತೆ ಸುಸ್ಥಿರ ಹಾಗೂ ಮೊದಲಿನಂತರ ವಾತಾವರಣ ಮೂಡಿಸಲು ಎಲ್ಲಾ ಸಮುದಾಯಗಳು ಮುಂದೆಬರುವ ಅನಿವಾರ್ಯತೆ ಇದೆ.ಧಾರ್ಮಿಕ ನಾಯಕರು ಇದರಲ್ಲಿ ಪ್ರಮುಖ ಪಾತ್ರ ವಹಿಸಲಿದ್ದು ಈ ಪರಿಸ್ಥಿತಿ ಗೆ ಪರಿಹಾರ ಒದಗಿಸಲು ಮುಂದಾಗಬೇಕಿದೆ. ಜಾಗತಿಕ ಆರೋಗ್ಯ ಬಿಕ್ಕಟ್ಟು ಅಲ್ಲ ಬದಲಾಗಿ ಮಾನವನ ಜೀವನದ ಬಿಕ್ಕಟ್ಟು.ಸೌಹಾರ್ದತೆ ಮೂಡಿಸುವ ನಿಟ್ಟಿನಲ್ಲಿ ಅನೇಕ ಧಾರ್ಮಿಕ ಮುಖಂಡರು ಮುಂದೆ ಬರುತ್ತಿದ್ದಾರೆ. ಇದೇ ವೇಳೆ ಧಾರ್ಮಿಕ ಮುಖಂಡರಿಗೆ ಧನ್ಯವಾದ ತಿಳಿಸಿದ ಗುಟೆರೆಸ್ ಕೆಲವು ಭಾಗಗಳಲ್ಲಿ ಧಾರ್ಮಿಕ ವಿಚಾರದಿಂದಾಗಿ ಜನರನ್ನು ಕೆರಳಿಸುವ ಕೆಲಸವಾಗುತ್ತಿದೆ. ಜನರಿಗೆ ಕೋಮಿನ ವಿರುದ್ದ ಪ್ರಚೋದಿಸುವ ಮೂಲಕ ಜನರ ಭಾವನೆಗಳನ್ನು ಕೆರಳಿಸಲಾಗುತ್ತಿದೆ. ನಾಯಕರ ವೈಫಲ್ಯ ವನ್ನು ತಿಳಿದುಕೊಂಡು ಉಗ್ರಗಾಮಿಗಳು ತಮ್ಮ ಚಟುವಟಿಕೆ ಗೆ ಬಳಸಿಕೊಳ್ಳುತ್ತಿದ್ದಾರೆ. ಹಾಗಾಗಿ ಜಾಗತಿಕ ಸೌಹಾರ್ಧಕ್ಕಾಗಿ ಧರ್ಮ ಗುರುಗಳು ಮುಂದೆ ಬರಬೇಕು ಎಂದು ಗುಟೆರೆಸ್ ಕರೆ ನೀಡಿದ್ದಾರೆ.