ಕೊಪ್ಪಳ: ಧಾರವಾಡ ಜಿಲ್ಲಾ ಕೆಎ-ಪಿ194 ಕೊರೋನಾ ಸೊಂಕಿತನೊಂದಿಗೆ ವಿ.ಆರ್ ಎಲ್ ಟ್ರಾವೇಲ್ಸ್ ಮೂಲಕ ಮುಂಬೈಯಿಂದ ಹುಬ್ಬಳ್ಳಿಗೆ ಪ್ರಯಾಣ ಬೆಳೆಸಿ ಕೊಪ್ಪಳದ ಭಾಗ್ಯನಗರದಲ್ಲಿ ವಾಸವಾಗಿದ್ದ ಮುಂಬೈ ಮೂಲದ ಯುವತಿಗೆ ಕೊರೋನಾ ಸೋಂಕು ಇಲ್ಲವೆಂದು ದೃಡ ಪಟ್ಟಿರುವುದು ಜಿಲ್ಲಾಧಿಕಾರಿ ಪಿ. ಸುನೀಲ್ ಕುಮಾರ ಸ್ಪಷ್ಟಪಡಿಸಿದ್ದಾರೆ.
ಪ್ರಕಟಣೆಯ ಮೂಲಕ ತಿಳಿಸಿದ ಅವರು, ಗುರುವಾರ ಸಂಜೆ ಈ ವರದಿಯ ಪರೀಕ್ಷೆಗೆ ಕಳಿಸಿದಾಗ ಇಡಿ ಕೊಪ್ಪಳವೇ ತಲ್ಲಣಗೊಂಡಿತು. ಆದರೆ ಪರೀಕ್ಷೆಯ ವರದಿಯಲ್ಲಿ ಮಹಿಳೆಗೆ ಸೋಂಕು ಇಲ್ಲದಿರುವುದು ಕೇಳಿದ ಕೊಪ್ಪಳದ ಜನತೆ ನಿಟ್ಟುಸಿರು ಬಿಟ್ಟಿದ್ದಾರೆ.
ಧಾರವಾಡದ ಸೊಂಕಿತನೊಂದಿಗೆ ಮಾ.19ರಂದು ಮುಂಬೈಯಿಂದ ಹುಬ್ಬಳಿಗೆ ಪ್ರಯಾಣ ಬೆಳೆಸಿದ ಯುವತಿ ಹುಬ್ಬಳ್ಳಿಯಲ್ಲಿ ಅಂದು ವಾಸ್ತವ್ಯ ಮಾಡಿ, ಏ.13ರಂದು ಕೊಪ್ಪಳದ ಮೂಲಕ ಸಮೀಪದ ಭಾಗ್ಯನಗರದ ಕದಂಬ ನಗರದ ಶಾಂತಾರಾಮ ಮನೆಯಲ್ಲಿ ವಾಸ್ತವ ಹೂಡಿದ್ದರು.
ಆದರೆ ಏ.14ರಂದು ಭಾಗ್ಯನರ ಉಧ್ಯಮಿ ವ್ಯಕ್ತಿಯೋಬ್ಬನು ಮಹಿಳೆಗೆ ಮುಂಬೈಗೆ ಪ್ರಯಾಣ ಬೆಳೆಸಲು ಪಾಸ್ ಪಡೆಯಲು ಎಸ್ಪಿ ಆಫೀಸ್ಗೆ ಬಂದಿರುವಾಗ ಅಧಿಕಾರಿಗಳು ಕ್ವಾರಂಟೈನ್ ದಲ್ಲಿರುವಂತೆ ಸೂಚಿಸಿದ್ದರು. ಇದಕ್ಕೆ ಒಪ್ಪದ ವ್ಯಕ್ತಿಯರ್ವನ ಹಾಗೂ ಮಹಿಳೆಯ ಮೇಲೆ ಅಧಿಕಾರಿಗಳು ಕ್ರೀಮಿನಲ್ ಪ್ರಕರಣ ದಾಖಲಿಸಿ ಐಸೋಲೇಷನ್ ಕ್ವಾರಂಟೈನ್ನಲ್ಲಿ ಇರಿಸಿದ್ದಾರೆ.
ಒಟ್ಟಾರೆಯಾಗಿ ಜಿಲ್ಲೆಯಿಂದ ಪರೀಕ್ಷೆಗೆ ಕಳುಯಿಸಿದ್ದ ಒಟ್ಟು 262 ರಕ್ತ ಮಾದರಿ ಪರೀಕ್ಷೆಯಲ್ಲಿ ಗುರುವಾರ ಬಂದಿರುವ 247 ರಕ್ತ ಮಾದರಿಗಳೆಲ್ಲವೂ ನೆಗಟಿವ್ ಆಗಿರುತ್ತವೆ. ಜಿಲ್ಲೆಯಲ್ಲಿ ಇನ್ನೂ 15 ರಕ್ತದ ಮಾದರಿ ಪರೀಕ್ಷೆಯಲ್ಲಿ ಬಾಕಿ ಉಳಿದುಕೊಂಡಿವೆ ಎಂದು ಜಿಲ್ಲಾಧಿಕಾರಿ ಪಿ. ಸುನೀಲ್ ಕುಮಾರ ತಿಳಿಸಿದ್ದಾರೆ.