ಅಮೆರಿಕ: ದೇಶದಲ್ಲಿ ಕೊರೋನಾ ವೈರಸ್ ನಿಂದ 41 ಮಂದಿ ಸಾವನ್ನಪ್ಪಿದ್ದು, ಡೊನಾಲ್ಡ್ ಟ್ರಂಪ್ ಸರ್ಕಾರ ರಾಷ್ಟ್ರೀಯ ತುರ್ತು ಪರಿಸ್ಥಿತಿ ಘೋಷಿಸಿದೆ.
ಇದಾಗಲೇ ಸರ್ಕಾರ ಆಸ್ಪತ್ರೆಗಳಲ್ಲಿ ತುರ್ತು ಕೇಂದ್ರಗಳನ್ನು ಪ್ರಾರಂಭ ಮಾಡಿದೆ. ಕ್ಯಾಲಿಫೋರ್ನಿಯಾ, ಫ್ಲೋರಿಡಾ ಜಾರ್ಜಿಯಾ ಕಾನ್ಸಾಸ್, ನ್ಯೂಜರ್ಸಿ, ಸೌತ್ ಡಕೋಟಾ ಸೇರಿದಂತೆ ದೇಶದಲ್ಲಿ 457 ಕೊರೋನಾ ಪ್ರಕರಣಗಳು ವರದಿಯಾಗಿದೆ. ವಾಷಿಂಗ್ಟನ್ ನಲ್ಲಿ 31ಮಂದಿ ಬಲಿಯಾಗಿದ್ದು, ಒಟ್ಟು ದೇಶದಲ್ಲಿ 41ಮಂದಿ ಸಾವನ್ನಪ್ಪಿದ್ದಾರೆ.
ಡೊನಾಲ್ಡ್ ಟ್ರಂಪ್ ಗೂ ಕೊರೋನಾ ಪರೀಕ್ಷೆ
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಟ್ರಂಪ್ ತಾವು ಕೊರೋನಾ ಸೋಂಕಿತರನ್ನು ಭೇಟಿಯಾದ ನಂತರ ಯಾವುದೇ ಪರೀಕ್ಷೆ ಮಾಡಿಸಿಕೊಂಡಿಲ್ಲ ಎಂದು ಹೇಳಿದರು. ಮುಂದಿನ ದಿನಗಳಲ್ಲಿ ಕೊರೋನಾ ಸೋಂಕು ಪತ್ತೆ ಪರೀಕ್ಷೆ ಮಾಡಿಸಿಕೊಳ್ಳುವುದಾಗಿ ಹೇಳಿದ್ದಾರೆ.
ನನಗೆ ಕೊರೋನಾ ಸೋಂಕಿನ ಯಾವುದೇ ಲಕ್ಷಣಗಳು ಇಲ್ಲದ ಕಾರಣ ಕೊರೋನಾ ಪರೀಕ್ಷೆ ಅಗತ್ಯವಿಲ್ಲ ಎಂದು ವೈಟ್ ಹೌಸ್ ವೈದ್ಯರು ತಿಳಿಸಿರುವುದಾಗಿ ಹೇಳಿದ್ದಾರೆ.
US President Donald Trump: I am officially declaring a national emergency. #Coronavirus pic.twitter.com/BTpXMkx0RC
— ANI (@ANI) March 13, 2020