ಮಂಡ್ಯ: ಕೊರೋನಾ ಸೋಂಕಿಗೆ ಒಳಗಾಗಿದ್ದ ಕಲ್ಮನೆ ಕಾಮೇಗೌಡರು ಸಂಪೂರ್ಣ ಗುಣಮುಖರಾಗಿ ಸೋಮವಾರ ಆಸ್ಪತ್ರೆಯಿಂದ ಬಿಡುಗಡೆಯಾದರು. ಸೋಂಕಿನಿಂದ
ಮುಕ್ತರಾದ ಕಲ್ಮನೆ ಕಾಮೇಗೌಡರಿಗೆ ಮಿಮ್ಸ್ ಆಸ್ಪತ್ರೆ ಆವರಣದಲ್ಲಿ ಪುಷ್ಪವೃಷ್ಠಿ ಮಾಡಿ ಗುಲಾಬಿ ಹೂ ನೀಡಿ ಅಭಿನಂದಿಸಲಾಯಿತು.
ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್ ಮಾತನಾಡಿ, ಹತ್ತಾರು ಕೆರೆಗಳನ್ನು ನಿರ್ಮಿಸಿರುವ ಕಾಮೇಗೌಡರು ದೇಶದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಕಾಮೇಗೌಡರು ಈಗ ಕೊರೋನಾದಿಂದ ಸಂಪೂರ್ಣ ಗುಣಮುಖರಾಗಿದ್ದಾರೆ. ಸೋಂಕಿಗೆ ಒಳಗಾಗಿದ್ದರೂ ದೃತಿಗೆಡದೆ, ಆತಂಕಕ್ಕೆ ಒಳಗಾಗದೆ ಸಮರ್ಥವಾಗಿ ಮತ್ತು ಆತ್ಮವಿಶ್ವಾಸದಿಂದ ಎದುರಿಸಿ ಗೆದ್ದಿದ್ದಾರೆ ಎಂದರು.
ಅವರ ರಕ್ತ ಮತ್ತು ಗಂಟಲಿನ ದ್ರವ ಪರೀಕ್ಷೆಗೆ ಒಳಪಡಿಸಿದಾಗ ನೆಗೆಟೀವ್ ಬಂದಿದೆ. ಗುಣಮುಖರಾಗಿರುವ ಅವರನ್ನು ತಮ್ಮ ಮನೆಯಲ್ಲಿ ಜೀವನ ನಡೆಸಲು ಕಳುಹಿಸಿಕೊಡುತ್ತಿದ್ದೇವೆ. ಅವರ ಚಿಕಿತ್ಸೆಗೆ ಬೆಂಬಲವಾಗಿ ನಿಂತು ಆರೈಕೆ ಮಾಡಿದ ಆಸ್ಪತ್ರೆ ವೈದ್ಯರು ಹಾಗೂ ಸಿಬ್ಬಂದಿಗೆ ಅಭಿನಂದನೆ ಸಲ್ಲಿಸಿದರು.
ಕೊರೋನಾ ವಿರುದ್ಧ ಎಲ್ಲರೂ ಧೈರ್ಯದಿಂದ ಹೋರಾಟ ನಡೆಸುವ ಮನೋಭಾವ ಬೆಳೆಸಿಕೊಳ್ಳಬೇಕು. ಸಾಮಾಜಿಕ ಅಂತರ ಕಾಪಾಡಿಕೊಂಡು ಮಾಸ್ಕ್ `ರಿಸುವ ಜೊತೆಗೆ ಸ್ಯಾನಿಟೈಸರ್ ಬಳಸುವಂತಹ ಮುಂಜಾಗ್ರತಾ ಕ್ರಮಗಳನ್ನು ಪ್ರತಿಯೊಬ್ಬರೂ ಅನುಸರಿಸಬೇಕು. ರೋಗ ನಿರೋ`ಕ ಶಕ್ತಿ ಹೆಚ್ಚಿಸುವ ಆಹಾರ, ಕಷಾಯವನ್ನು ಸೇವಿಸುವುದರಿಂದ ಸೋಂಕನ್ನು ದೂರ ಇಡಬಹುದು ಎಂದು ಹೇಳಿದರು.