Wednesday, June 29, 2022

Latest Posts

ಕೊರೋನಾ ಸೋಂಕಿಗೆ ದ.ಕ. ಜಿಲ್ಲೆಯಲ್ಲಿ ಮೊದಲು ಸಾವನ್ನಪ್ಪಿದ ಗೃಹಿಣಿಯ ಪತಿ, ಮಗ ಕ್ವಾರಂಟೈನ್‌ನಿಂದ ಬಿಡುಗಡೆ

ಬಂಟ್ವಾಳ: ಕೊರೋನಾ ಸೋಂಕಿಗೆ ದ.ಕ. ಜಿಲ್ಲೆಯಲ್ಲಿ ಮೊದಲು ಸಾವನ್ನಪ್ಪಿದ ಬಂಟ್ವಾಳ ಪೇಟೆಯ ಗೃಹಿಣಿಯ ಪತಿ ಹಾಗೂ ಮಗ ಎನ್‌ಐಟಿಕೆ ಕ್ವಾರಂಟೈನ್‌ನಿಂದ ಬಿಡುಗಡೆಯಾಗಿ ಮನೆಗಾಗಮಿಸಿದ್ದಾರೆ.
ಎ.19 ರಂದು ಬೆಳಿಗ್ಗೆ ಕೋವಿಡ್ ಆಸ್ಪತ್ರೆಯಲ್ಲಿ 50 ರ ಹರೆಯದ ಗೃಹಿಣಿ ಸಾವನ್ನಪ್ಪಿದ್ದು, ತಕ್ಷಣ ಇವರ ಪತಿ, ಮಗ, ಮಗಳನ್ನು ಸಹಿತ ಸಂಬಂಧಿಗಳು, ನೆರೆಯವರನ್ನು ಎನ್‌ಐಟಿಕೆ ಕ್ವಾರೆಂಟೈನ್‌ನಲ್ಲಿರಿಸಲಾಗಿತ್ತು. ಎರಡು ದಿನಗಳ ಹಿಂದೆ ಮೃತ ಗೃಹಿಣಿಯ 16ರ ಹರೆಯದ ಪುತ್ರಿಗೆ ಸೋಂಕು ದೃಢಪಟ್ಟಿದ್ದು, ಬಾಲಕಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಚಿಕಿತ್ಸೆ ಮುಂದುವರಿದಿದೆ. ಇದೀಗ ಈ ಬಾಲಕಿಯ ತಂದೆ, ಅಣ್ಣ, ಸೋಂಕಿನಿಂದ ಮೃತಪಟ್ಟ ನೆರೆಮನೆಯ ವೃದ್ಧೆಯ ಪತಿ,ಮಗ ಹಾಗೂ ಪಕ್ಕದ ಇನ್ನೊಂದು ಮನೆ ಮಂದಿ ಮೊದಲಾದವರು ಎನ್‌ಐಟಿಕೆ ಕ್ವಾರಂಟೈನ್‌ನಿಂದ ಬಿಡುಗಡೆಗೊಂಡು ಮನೆಗೆ ತಲುಪಿದ್ದಾರೆ.
ಸದ್ಯ ಬಾಲಕಿ, ನೆರೆ ಮನೆಯ ಮೃತ ವೃದ್ಧೆಯ ಪುತ್ರಿ ಹಾಗೂ ಪಕ್ಕದ ಕಂಪೌಂಡ್‌ನ ಇವರ ಸಂಬಂಧಿ 69ರ ಹರೆಯದ ವೃದ್ಧರು ಸಹಿತ ಈ ಮೂವರಿಗೆ ಪಾಸಿಟಿವ್ ಕಂಡುಬಂದ ಹಿನ್ನಲೆಯಲ್ಲಿ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss