Wednesday, June 29, 2022

Latest Posts

ಕೊರೋನಾ ಸೋಂಕಿಗೆ ರಂಗಭೂಮಿ ಕಲಾವಿದ, ಎಂಜಿನಿಯರ್ ರಾಜಕುಮಾರ್ ಬಲಿ

ಪಾಂಡವಪುರ: ನೀರಾವರಿ ಇಲಾಖೆಯಲ್ಲಿ ಇಂಜಿನಿಯರ್ ಆಗಿದ್ದು, ರಂಗಭೂಮಿಯೊಂದಿಗೆ ಅಪಾರ ನಂಟು ಹೊಂದಿದ್ದ
ಕ್ಯಾತನಹಳ್ಳಿ ರಾಜಕುಮಾರ್ (58) ಮಂಗಳವಾರ ಬೆಳಗ್ಗೆ ಕೋವಿಡ್-19ಗೆ ಬಲಿಯಾಗಿದ್ದಾರೆ.
ಮೂಲತಃ ಶ್ರೀರಂಗಪಟ್ಟಣ ತಾಲೂಕು ದರಸಗುಪ್ಪೆ ಗ್ರಾಮದವರಾದ ರಾಜಕುಮಾರ್, ಪಾಂಡವಪುರ ತಾಲೂಕಿನ ಕ್ಯಾತನಹಳ್ಳಿ
ಗ್ರಾಮದಲ್ಲಿ ಬಹಳ ವರ್ಷಗಳಿಂದಲೂ ವಾಸವಿದ್ದರು. ನೀರಾವರಿ ಇಲಾಖೆಯಲ್ಲಿ ಇಂಜಿನಿಯರ್ ಆಗಿದ್ದ ರಾಜಕುಮಾರ್ ರಂಗಭೂಮಿ
ಯಲ್ಲಿ ತಮ್ಮನ್ನು ಗುರುತಿಸಿಕೊಂಡಿದ್ದು, ಕ್ಯಾತನಹಳ್ಳಿ ಹಸಿರು ಕಲಾವಿದರ ಸಂಘ ಅಭಿನಯಿಸಿದ್ದ ಅನೇಕ ನಾಟಕಗಳಲ್ಲಿ ನಟಿಸಿದ್ದರು.
ಅದರಲ್ಲೂ ಪಟೇಲನ ಪಾತ್ರವನ್ನು ಬಹಳ ಮನೋಜ್ಞವಾಗಿ ಅಭಿನಯಿಸುತ್ತಿದ್ದ ರಾಜಕುಮಾರ್ ತಮ್ಮ ಅಭಿನಯದ ಮೂಲಕವೇ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದ್ದರು.
ಮೃತ ರಾಜಕುಮಾರ್‍ಗೆ ಪತ್ನಿ ಹಾಗೂ ಇಬ್ಬರು ಮಕ್ಕಳು ಇದ್ದಾರೆ. ಮೃತರ ಅಂತ್ಯಕ್ರಿಯೆ ಕ್ಯಾತನಹಳ್ಳಿ ಗ್ರಾಮದ ಅವರ ಸ್ವಂತ ಜಮೀನಿನಲ್ಲಿ ಮಂಗಳವಾರ ಮಧ್ಯಾಹ್ನ ನಡೆಯಿತು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss