ಹುಬ್ಬಳ್ಳಿ: ಕೊವಿಡ್-19 ವೈರಸ್ ದೃಢಪಟ್ಟಿದ್ದ ಇಲ್ಲಿನ ಮುಲ್ಲಾ ಓಣಿಯ ವ್ಯಕ್ತಿಯ ಮಾಹಿತಿ ಸಂಗ್ರಹಿಸಿದ್ದ ಕಮರಿಪೇಟೆ ಪೊಲೀಸ್ ಠಾಣೆಯ ಐವರು ಪೊಲೀಸರನ್ನು ಈಗ ಹೋಮ್ ಕ್ವಾರಂಟೈನ್ ಇಡಲಾಗಿದೆ.
ಕೋವಿಡ್-19 ಸೋಂಕು ಶಂಕೆ ಹಿನ್ನೆಲೆಯಲ್ಲಿ ಸೋಂಕಿತನ ಮಾಹಿತಿ ಸಂಗ್ರಹಿಸಲು ಕಮರಿಪೇಟೆ ಠಾಣೆಯ ಎಸ್.ಪಿ ಮತ್ತು ಚಾಲುಕ್ಯ ವಾಹನದ ಸಿಬ್ಬಂದಿ ತೆರಳಿದಾಗ ಪ್ರಾಥಮಿಕ ಸಂಪರ್ಕಕ್ಕೆ ಬಂದಿದ್ದರು.
ಹೀಗಾಗಿ ಮುಂಜಾಗ್ರತಾ ಕ್ರಮವಾಗಿ ಅವರನ್ನು ಕ್ವಾರಂಟೈನ್ ನಲ್ಲಿ ಇಡಲಾಗಿದೆ. ಆರೋಗ್ಯ ಇಲಾಖೆಯವರು ಐವರು ಸಿಬ್ಬಂದಿಗೆ ಸೀಲ್ ಹಾಕಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.