Tuesday, June 28, 2022

Latest Posts

ಕೊರೋನಾ ಸೋಂಕಿತ ಮಹಿಳೆ ಸಾವು: ಬಜರಂಗದಳ ಕಾರ್ಯಕರ್ತರಿಂದ ಶವ ಸಂಸ್ಕಾರ

ಮಡಿಕೇರಿ: ಮಡಿಕೇರಿಯ ಜಿಲ್ಲಾ ಆಸ್ಪತ್ರೆಯಲ್ಲಿ ಶನಿವಾರ ರಾತ್ರಿ ಮೃತರಾದ ಗೋಣಿಕೊಪ್ಪಲು ಮೂಲದ ಕೋವಿಡ್ 19 ಮಹಿಳೆಯ ಶವ ಸಂಸ್ಕಾರವನ್ನು ಕೋವಿಡ್-19 ಮಾರ್ಗಸೂಚಿ ಪ್ರಕಾರ ಬಜರಂಗದಳದ ಕಾರ್ಯಕರ್ತರು ಮಡಿಕೇರಿಯ ಹಿಂದೂ ರುದ್ರಭೂಮಿಯಲ್ಲಿ ಅಗ್ನಿ ಸ್ಪರ್ಶ ನೀಡುವ ಮೂಲಕ ನಡೆಸಿದರು.
ಮಡಿಕೇರಿ ನಗರ ಶಾಂತಿನಿಕೇತನ ಘಟಕದ ಬಜರಂಗದಳದ ಕೋವಿಡ್ ವಾರಿಯರ್ಸ್ ದುರ್ಗೇಶ್, ಜಗದೀಶ್, ಆರ್.ಮಹೇಶ್, ದರ್ಶನ್ ಅವರುಗಳು ಅಂತ್ಯ ಸಂಸ್ಕಾರದ ಕಾರ್ಯ ನಿರ್ವಹಿಸಿದರು. ವಿಶ್ವ ಹಿಂದೂ ಪರಿಷದ್‍ನ ಹಿರಿಯರು, ಬಜರಂಗದಳದ ಪ್ರಮುಖರು ಜೊತೆಗಿದ್ದು ಮಾರ್ಗದರ್ಶನ ನೀಡಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_img
spot_img
spot_img
spot_img

Don't Miss