ಪ್ಯೊಂಗ್ಯಾಂಗ್: ವಿಶ್ವಾದ್ಯಂತ ಕೊರೋನಾ ಹೆಚ್ಚುತ್ತಿದ್ದರೆ , ಇತ್ತ ಉತ್ತರ ಕೊರಿಯಾ ಮಾತ್ರ ಇದುವರೆಗೆ ಕೊರೋನಾ ಸೋಂಕಿನಿಂದ ಮುಕ್ತವಾಗಿದೆ. ಸಾಂಕ್ರಾಮಿಕದ ಸಂಕಷ್ಟದ ಸಂದರ್ಭದಲ್ಲಿ ದೇಶದ ನಾಗರಿಕರು ಉತ್ತಮ ಆರೋಗ್ಯ ಕಾಳಜಿ ಕಾಪಾಡಿಕೊಂಡಿರುವುದಕ್ಕೆ ಅಧ್ಯಕ್ಷ ಕಿಮ್ ಜಾಂಗ್ ಉನ್ ನಿನ್ನೆ ಮಿಲಿಟರಿ ಪರೇಡ್ ನಲ್ಲಿ ಧನ್ಯವಾದ ಹೇಳಿದರು.
ಉತ್ತರ ಕೊರಿಯಾದ ಆಡಳಿತಾರೂಢ ವರ್ಕರ್ಸ್ ಪಾರ್ಟಿಯು ತನ್ನ 75ನೇ ವರ್ಷಾಚರಣೆ ಆಚರಿಸಿಕೊಳ್ಳುತ್ತಿದ್ದ ಸಂದರ್ಭದಲ್ಲಿ ಮಾತನಾಡಿದ ಕಿಮ್ ಜಾಂಗ್ ಉನ್, ಕೊರೋನಾ ಸೋಂಕಿಗೆ ತುತ್ತಾಗದೆ ಜನರು ಉತ್ತಮ ಆರೋಗ್ಯ ಕಾಪಾಡಿಕೊಂಡಿರುವುದಕ್ಕೆ ನಾನು ಧನ್ಯವಾದ ಹೇಳುತ್ತೇನೆ ಎಂದರು.
ನಮ್ಮ ಪಕ್ಷಕ್ಕೆ ಪ್ರತಿಯೊಬ್ಬ ನಾಗರಿಕರ ಜೀವ ಬೇರೆಲ್ಲಕ್ಕಿಂತಲೂ ಮುಖ್ಯ. ನಾಗರಿಕರ ಆರೋಗ್ಯ ನಮ್ಮ ಪಕ್ಷದ ಇರುವಿಕೆಗೆ ಸಹ ಮುಖ್ಯವಾಗಿದೆ ಎಂದು ಕಿಮ್ ಜಾಂಗ್ ಉನ್ ಹೇಳಿದ್ದಾರೆ.