Monday, August 8, 2022

Latest Posts

ಕೊರೋನಾ ಸೋಂಕಿನಿಂದ ಮೃತಪಟ್ಟ ವ್ಯಕ್ತಿಯ ಶವ ಕೊಡದೆ ಸತಾಯಿಸಿದ ಮಿಮ್ಸ್ ವೈದ್ಯರು: ಸಂಬಂಧಿಕರ ಪ್ರತಿಭಟನೆ

ಮಂಡ್ಯ : ಕೊರೋನಾ ಸೋಂಕಿನಿಂದ ಮೃತಪಟ್ಟಿದ್ದನೆನ್ನಲಾದ ವ್ಯಕ್ತಿಯ ಶವವನ್ನು ವಾರಸುದಾರರಿಗೆ ನೀಡದೆ ಸತಾಯಿಸಿದ್ದರಿಂದ ರೊಚ್ಚಿಗೆದ್ದ ಮೃತನ ಸಂಬಂಧಿಕರು ಮಿಮ್ಸ್ ಶವಾಗಾರದ ಮುಂದೆ ಪ್ರತಿಭಟನೆ ನಡೆಸಿದರು.
ಕೆ.ಎಂ. ದೊಡ್ಡಿಯ ಚಾಮುಂಡೇಶ್ವರಿ ಸಕ್ಕರೆ ಕಾರ್ಖಾನೆ ನಿವೃತ ನೌಕರ ಶ್ರೀನಿವಾಸಲು (63) ಎಂಬುವರು ಶನಿವಾರ ಮುಂಜಾನೆ 4-30ರ ಸಮಯದಲ್ಲಿ ಮೃತಪಟ್ಟಿದ್ದು, ಶವವನ್ನು ಸಂಜೆಯವರೆಗೆವಿಗೂ ವಾರಸುದಾರರಿಗೆ ನೀಡದೆ ಸತಾಸಿದ್ದರಿಂದ ರೊಚ್ಚಿಗೆದ್ದ ಮೃತರ ಸಂಬಂಧಿಕರು ಪ್ರತಿಭಟನೆ ನಡೆಸಿದರು.
ಎರಡೂ ಕಿಡ್ನಿ ವೈಫಲ್ಯ, ಶ್ವಾಸಕೋಸ ಹಾಗೂ ಲಿವರ್ ತೊಂದರೆಯಿಂದ ಬಳಲುತ್ತಿದ್ದ ಶ್ರೀನಿವಾಸಲು ಅವರನ್ನು ಆ. 20ರಂದು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಮಿಮ್ಸ್‍ನ ಸಾಮಾನ್ಯ ವಾರ್ಡಿನಲ್ಲಿ ದಾಖಲಿಸಿಕೊಂಡು ಚಿಕಿತ್ಸೆ ನೀಡಲಾಗುತ್ತಿತ್ತು. ರೋಗಿ ಗಂಭೀರ ಸ್ಥಿತಿಗೆ ತಲುಪಿದಾಗ ಅವರನ್ನು ತೀವ್ರ ನಿಗಾ ಘಟಕ್ಕೆ ಸ್ಥಳಾಂತರ ಮಾಡಿ ಚಿಕಿತ್ಸೆ ನೀಡಲಾಯಿತು. ಶನಿವಾರ ಮುಂಜಾನೆ 4-30ರ ವೇಳೆಗೆ ಶ್ರೀನಿವಾಸಲು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟರು.
ಶವವನ್ನು ಮಿಮ್ಸ್‍ನ ಶವಾಗಾರಕ್ಕೆ ಸಾಗಿಸಿ ಬೆಳಗ್ಗೆ 7 ಗಂಟೆಯ ಸುಮಾರಿಗೆ ಶವ ಪರೀಕ್ಷೆ ನಡೆಸಿ 10 ಗಂಟೆಯ ವೇಳೆಗೆ ಶವವನ್ನು ನೀಡುವುದಾಗಿ ಸಿಬ್ಬಂದಿ ತಿಳಿಸಿದರು. ಈ ಮಧ್ಯೆ ಶ್ರೀನಿವಾಸಲು ಅವರ ಗಂಟಲ ದ್ರವ ಪರೀಕ್ಷೆಗೆ ಕಳುಹಿಸಿದ್ದು, ಕೊರೋನಾ ಸೋಂಕು ಇರುವುದು ದೃಢಪಟ್ಟಿದೆ ಎಂದು ವೈದ್ಯರು ತಿಳಿಸಿದರು.
ಕೊರೋನಾ ಸೋಂಕು ಇರುವ ಬಗ್ಗೆ ದಾಖಲೆ ಕೇಳಿದಾಗ, ಪ್ರಯೋಗಾಲಯದಿಂದ ಪೊಲೀಸ್ ಮೂಲಕ ತಿಳಿಸಿದ್ದಾರೆ ಎಂದು ವೈದ್ಯರು ಸಬೂಬು ಹೇಳಿದರು. ಈ ಹಿನ್ನಲೆಯಲ್ಲಿ ಶವವನ್ನು ತಾಲೂಕಿನ ಸುಂಡಹಳ್ಳಿ ಬಳಿ ಜಿಲ್ಲಾಡಳಿತ ಗುರುತಿಸಿದ್ದ ಜಾಗದಲ್ಲಿ ಅಂತ್ಯಕ್ರಿಯೆ ನಡೆಸುವುದಾಗಿ ಅಧಿಕಾರಿಗಳು ತಿಳಿಸಿದರು. ಆದರೆ ಶವವನ್ನು ಸಾಗಿಸಲು ಆ್ಯಂಬುಲೆನ್ಸ್ ಬರಲಿಲ್ಲ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss