Wednesday, June 29, 2022

Latest Posts

ಕಲಬುರಗಿ| ಕೊರೋನಾ ಸೋಂಕಿನಿಂದ 13 ಜನ ಗುಣಮುಖ

ಕಲಬುರಗಿ: ಕೊರೋನಾ ಸೋಂಕಿನಿಂದ‌ ಕಲಬುರಗಿ ನಗರದ 12 ಮತ್ತು ಆಳಂದ ಪಟ್ಟಣದ 65 ವರ್ಷದ ವೃದ್ಧೆ ಸೇರಿದಂತೆ ಒಟ್ಟು 13 ಜನ ಕೋವಿಡ್-19 ಪೀಡಿತರು ಸೋಂಕಿನಿಂದ ಗುಣಮುಖರಾಗಿ ರವಿವಾರ ಅಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ ಎಂದು ಡಿ.ಸಿ. ಶರತ್ ಬಿ. ತಿಳಿಸಿದ್ದಾರೆ.

ಜಿಲ್ಲೆಯಲ್ಲಿ ಕೊರೋನಾ‌ ಸೋಂಕು ಪತ್ತೆಯಾದ ನಂತರ‌ ರವಿವಾರ ಪ್ರಥಮ ಬಾರಿಗೆ ಒಂದೇ‌ ದಿನ‌ ಇಷ್ಟೊಂದು ಗರಿಷ್ಠ ಪ್ರಮಾಣದಲ್ಲಿ ರೋಗಿಗಳು ಗುಣಮುಖರಾಗಿ‌ ಅಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.

ಜಿಲ್ಲೆಯ ಆಳಂದ‌‌ ಪಟ್ಟಣದ 65 ವರ್ಷದ ವೃದ್ಧೆ (ಪಿ.502), ಕಲಬುರಗಿ ನಗರದ ಖಮರ್‌ ಕಾಲೋನಿಯ 7 ವರ್ಷದ ಬಾಲಕ‌(ಪಿ.503) ಮತ್ತು 40 ವರ್ಷದ ಯುವತಿ (ಪಿ.517) ಹಾಗೂ ಇಸ್ಲಾಮಾಬಾದ‌ ಕಾಲೋನಿಯ 43 ವರ್ಷದ ಪುರುಷ (ಪಿ. 517) ಮತ್ತು 28 ವರ್ಷದ ಯುವತಿ (ಪಿ.518) ಗುಣಮುಖರಾಗಿದ್ದಾರೆ.

ಅದೇ‌ ರೀತಿ ಕಲಬುರಗಿಯ ಮೋಮಿನಪುರ ಪ್ರದೇಶದ 45 ವರ್ಷದ ಯುವತಿ (ಪಿ.519), 22 ವರ್ಷದ ಯುವತಿ (ಪಿ.520), 28 ವರ್ಷದ ಯುವಕ (ಪಿ.526), 14 ವರ್ಷದ ಬಾಲಕಿ (ಪಿ.527), 22 ವರ್ಷದ ಯುವಕ (ಪಿ.528), 20 ವರ್ಷದ ಯುವತಿ (ಪಿ.530), 17 ವರ್ಷದ ಬಾಲಕಿ (ಪಿ.531) ಹಾಗೂ 12 ವರ್ಷದ  ಬಾಲಕಿ (ಪಿ.532) ಕೊರೋನಾ ಸೋಂಕಿನ ವಿರುದ್ಧ ಹೋರಾಡಿ ಚೇತರಿಕೆ ಕಂಡವರಾಗಿದ್ದಾರೆ.

ಇದರಿಂದ ಜಿಲ್ಲೆಯಲ್ಲಿ ಕೊರೋನಾ‌ ಪೀಡಿತ 71 ರೋಗಿಗಳಲ್ಲಿ 44 ಮಂದಿ ಗುಣಮುಖರಾಗಿ ಅಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ‌. 6 ಜನ ನಿಧನ‌ರಾಗಿದ್ದು, ಉಳಿದಂತೆ 21 ಮಂದಿ ಚಿಕಿತ್ಸೆ‌ ಮುಂದುವರೆದಿದೆ ಎಂದು ಡಿ.ಸಿ. ಶರತ್ ಬಿ. ತಿಳಿಸಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss