ಮೈಸೂರು: ಕೊರೋನಾ ವೈರಸ್ ಸೋಂಕಿತರ ಬಗ್ಗೆ ವರದಿಯನ್ನು ಸಲ್ಲಿಸದ ಖಾಸಾಗಿ ಆಸ್ಪತ್ರೆಗಳ ನೋಂದಣಿಯನ್ನು ರದ್ದುಪಡಿಸಲಾಗುವುದು ಎಂದು ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್ ಖಡಕ್ ಎಚ್ಚರಿಕೆ ನೀಡಿದ್ದಾರೆ.
ಮೈಸೂರು ನಗರದಲ್ಲಿ ಕೊರೋನಾ ವೈರಾಣು ಸೋಂಕು ಉಲ್ಬಣಗೊಳ್ಳುತ್ತಿರುವುದರಿಂದ, ವೈರಸ್ ನಿಯಂತ್ರಣ ಕಾರ್ಯಕ್ರಮದಡಿಯಲ್ಲಿ ಅಲೋಪತಿ, ಆಯುಷ್, ದಂತ ಸೇರಿದಂತೆ ಎಲ್ಲಾ ಖಾಸಗಿ ಆರೋಗ್ಯ ಸಂಸ್ಥೆಗಳು ಸಾರಿ, ಐಎಲ್ಐ ಮತ್ತು ಕೋವಿಡ್ ಸಸ್ಪೆಕ್ಟಡ್ ವರದಿಗಳನ್ನು hಣಣಠಿs://ಞಠಿme.ಞಚಿಡಿಟಿಚಿಣಚಿಞಚಿ.ಣeಛಿಞ ಇದರ ಮೂಲಕ ಪ್ರತಿದಿನ ದಾಖಲು ಮಾಡಲು ಈಗಾಗಲೇ ಹಲವು ಬಾರಿ ಸೂಚನೆಯನ್ನು ನೀಡಲಾಗಿತ್ತು. ದಾಖಲು ಮಾಡಿದ್ದರೆ, ಕ್ರಮ ಕೈಗೊಳ್ಳುವ ಎಚ್ಚರಿಕೆಯನ್ನೂ ಹಲವು ಬಾರಿ ನೀಡಲಾಗಿತ್ತು. ಹೀಗಿದ್ದರೂ ಸುಮಾರು ಆರೋಗ್ಯ ಸಂಸ್ಥೆಗಳು ದೈನಂದಿನ ವರದಿಗಳನ್ನು ದಾಖಲು ಮಾಡುತ್ತಿಲ್ಲ. ಅಂತಹ ಆರೋಗ್ಯ ಸಂಸ್ಥೆಗಳ ನೋಂದಣಿಯನ್ನು ರದ್ದುಪಡಿಸಲಾಗುವುದು ಎಂದು ತಿಳಿಸಿದ್ದಾರೆ. ಎಲ್ಲಾ ಖಾಸಗಿ ಆರೋಗ್ಯ ಸಂಸ್ಥೆಗಳಲ್ಲಿ ಗುರುತಿಸಲ್ಪಡುವ ಪ್ರತಿಯೊಂದು ಸಾರಿ, ಐಎಲ್ಐ ಪ್ರಕರಣಗಳನ್ನೂ ಸಹ ಉಚಿತವಾಗಿ ಸ್ವಾಬ್ ಟೆಸ್ಟಿಂಗ್ನ್ನು ಮಾಡಿಸಬೇಕು ಎಂದು ಸೂಚಿಸಿದ್ದಾರೆ.