ಟೋಕಿಯೋ: ಕೊರೋನಾ ವಿಚಾರದಲ್ಲಿ ಅಮೆರಿಕ ಪಲಾಯನವಾದ ಅನುಸರಿಸಿದೆ ಎಂದು ಚೀನಾ ತಿರುಗೇಟು ನೀಡಿದೆ.
ವುಹಾನ್ನಲ್ಲಿ ತನಿಖೆ ಮುಂದುವರಿಸುವ ಬಿಗಿಪಟ್ಟಿನಿಂದ ಹಿಂದೆ ಸರಿಯದ ಅಮೆರಿಕ ನಿಲುವನ್ನು ಚೀನಾ ವಿದೇಶಾಂಗ ಇಲಾಖೆ ಖಂಡಿಸಿದೆ. ಕೊರೋನಾ ಸೋಂಕಿಗೆ ಚೀನಾ ದೇಶವೇ ಹೊಣೆ ಎನ್ನಲು ಅಮೆರಿಕ ಬಳಿ ಗುಲಗಂಜಿಯಷ್ಟು ಪುರಾವೆಯೂ ಇಲ್ಲ. ಆದರೂ ಈ ದೇಶದ ಅಧ್ಯಕ್ಷರು ಚೀನಾ ಮೇಲೆ ಪ್ರತಿನಿತ್ಯ ಅಪಪ್ರಚಾರ ಶುರು ಮಾಡಿದ್ದಾರೆ. ಇದು ಪಲಾಯನವಾದವೇ ವಿನಹ ಕೊರೋನಾ ವಿರುದ್ದ ಹೋರಾಡುವ ಮನಸ್ಥಿತಿ ಅಲ್ಲ ಎಂದು ವಿದೇಶಾಂಗ ಇಲಾಖೆ ವಕ್ತಾರ ಪೆಂಗ್ ಷುವಾಂಗ್ ಹೇಳಿಕೆಯೊಂದನ್ನು ಬಿಡುಗಡೆ ಮಾಡಿದ್ದಾರೆ.