Wednesday, August 10, 2022

Latest Posts

ಕೊರೋನಾ ಸೋಂಕಿನ ‌ಭೀತಿಯ ನಡುವೆಯು ಹೊಸ ದಾಖಲೆ ನಿರ್ಮಿಸಿತು ಅಮೆರಿಕ ಅಧ್ಯಕ್ಷೀಯ ಚುನಾವಣೆ

ಹೊಸ ದಿಂಗತ ಆನ್ ಲೈನ್ ಡೆಸ್ಕ್:

ಕೊರೋನಾ ಸೋಂಕಿನ ‌ ಭೀತಿಯ ನಡುವೆ ಅಮೆರಿಕ ಅಧ್ಯಕ್ಷೀಯ ಚುನಾವಣೆ ಹಲವು ಹೊಸ ದಾಖಲೆಗಳನ್ನು ನಿರ್ಮಿಸಿದ್ದು, 50 ವರ್ಷಗಳ ಚುನಾವಣಾ ಇತಿಹಾಸದಲ್ಲಿ ಕಂಡರಿಯದ ಗರಿಷ್ಠ ಮತದಾನ ಈ ಚುನಾವಣೆಯಲ್ಲಿ ದಾಖಲಾಗಿದೆ.
ಹೌದು, 2008ರಲ್ಲಿ ಬರಾಕ್‌ ಒಬಾಮಾ ಅಧ್ಯಕ್ಷರಾಗಿ ಆಯ್ಕೆಯಾದ ಚುನಾವಣೆಯಲ್ಲಿಒಟ್ಟು ಮತ ಪ್ರಮಾಣದಲ್ಲಿ ಶೇ.0.4ರಷ್ಟು ಏರಿಕೆ ದಾಖಲಾಗಿತ್ತು. ಆ ದಾಖಲೆ ಕೂಡ ಈಗ ಚಿಂದಿಯಾಗಿದೆ.
ಈ ಬಾರಿ ಶೇ.62ರಷ್ಟು ಮತದಾನವಾಗಿದ್ದು, ಇದುವರೆಗೆ 148 ದಶಲಕ್ಷ ಮತಗಳ ಎಣಿಕೆ ಕಾರ್ಯ ಮುಗಿದಿದೆ. ಇದರಲ್ಲಿ ಡೆಮಾಕ್ರಟಿಕ್‌ ಅಭ್ಯರ್ಥಿ ಬೈಡೆನ್‌ ಅವರಿಗೆ 75 ದಶಲಕ್ಷ ಮತಗಳು ದಕ್ಕಿದ್ದರೆ, ರಿಪಬ್ಲಿಕನ್‌ ಅಭ್ಯರ್ಥಿ ಹಾಗೂ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರಿಗೆ 70 ದಶಲಕ್ಷ ಮತಗಳು ಲಭಿಸಿವೆ.
20ನೇ ಶತಮಾನ ಆರಂಭದಿಂದಲೂ ಇಷ್ಟೊಂದು ದೊಡ್ಡ ಪ್ರಮಾಣ ಮತದಾನ ದಾಖಲಾಗಿದ್ದು ಪ್ರಥಮ ಎಂದು ಚುನಾವಣಾ ತಜ್ಞರು ವಿಶ್ಲೇಷಿಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss