ಕೊರೋನಾ ಸೋಂಕು ಇಮ್ಮಡಿಯಾಗಲು ಬೇಕು 7.5 ದಿನ: ಕೇಂದ್ರ ಆರೋಗ್ಯ ಇಲಾಖೆ

0
118

ಹೊಸದಿಲ್ಲಿ: ದೇಶದಲ್ಲಿ ಕಿಲ್ಲರ್ ಕೊರೋನಾ ಪಿಡುಗು ದ್ವಿಗುಣವಾಗಲು 7.5 ದಿನಗಳು ಬೇಕಾಗುತ್ತದೆ ಎಂದು ಕೇಂದ್ರ ಆರೋಗ್ಯ ಇಲಾಖೆಯ ಜಂಟಿ ಕಾರ್ಯದರ್ಶಿ ಲವ ಅಗರ್ವಾಲ್ ತಿಳಿಸಿದ್ದಾರೆ.

ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೊರೋನಾ ವೈರಸ್ ತಡೆಗಟ್ಟಲು ದೇಶಾದ್ಯಂತ ಲಾಕ್ ಡೌನ್ ಜಾರಿಗೊಳಿಸಲಾಗಿದೆ. ಲಾಕ್ ಡೌನ್ ಗೂ ಮುನ್ನ ಕೊರೋನಾ ಸೋಂಕು 3.4 ದಿನಗಳಲ್ಲಿ ಹರಡುತ್ತಿತ್ತು, ಆದರೆ ಲಾಕ್ ಡೌನ್ ನಿಂದ ದೇಶದಲ್ಲಿ ಸೋಂಕಿತರ ಸಂಖ್ಯೆ ಕಡಿಮೆಯಾಗಿದ್ದು, ಈಗ ಸೋಂಕು ಹರಡಲು 7.5 ದಿನಗಳು ಬೇಕಾಗುತ್ತದೆ ಎಂದು ತಿಳಿಸಿದ್ದಾರೆ.

ಭಾರತದ 18 ರಾಜ್ಯಗಳು ಸೇರಿದಂತೆ ಕೇಂದ್ರಾಡಳಿತ ಪ್ರದೇಶಗಳಲ್ಲಿ ಕೊರೋನಾ ದ್ವಿಗುಂವಾಗುವ ಸಂಖ್ಯೆ ಕಡಿಮೆಯಾಗಿದೆ ಎಂದು ಲವ ಅಗರ್ವಾಲ್ ಹೇಳಿದರು.

ಅಂಡಮಾನ್- ನಿಕೋಬಾರ್ ದ್ವೀಪ, ಹಿಮಾಚಲ್, ಚಂಡೀಗಡ, ಅಸ್ಸಾಂ, ಉತ್ತರಖಂಡ, ಲಡಾಖ್ ಪ್ರದೇಶಗಳಲ್ಲಿ ಸೋಂಕು ಹರಡಲು 20 ರಿಂದ 30 ದಿನಗಳು ಬೇಕಾಗುತ್ತದೆ. ರಾಜ್ಯಗಳಾದ ದೆಹಲಿಯಲ್ಲಿ 8.5 ದಿನಗಳು, ತೆಲಂಗಾಣ 9.4, ಆಂಧ್ರ ಪ್ರದೇಶ-10.6, ಕರ್ನಾಟಕ 9.2, ಜಮ್ಮು ಕಾಶ್ಮೀರ 11.5, ತಮಿಳುನಾಡು 14 ದಿನ ಕೊರೋನಾ ಸೋಂಕು ಹರಡಲು ಬೇಕಾಗುತ್ತದೆ ಎಂದು ತಿಳಿಸಿದರು.

ದೇಶದಲ್ಲಿ ಕೊರೋನಾ ಸೋಂಕಿಗೆ ಕಳೆದ 24 ಗಂಟೆಗಳಲ್ಲಿ 1553 ಕೊರೋನಾ ಪಾಜಿಟಿವ್ ಪ್ರಕರಣ ಪತ್ತೆಯಾಗಿದ್ದು, ಸೋಂಕಿತರ ಸಂಖ್ಯೆ 18 ಸಾವಿರ ಗಡಿ ದಾಟಲಿದ್ದು, ಬಲಿಯಾದವರ ಸಂಖ್ಯೆ 600 ರ ಸಮೀಪದಲ್ಲಿದೆ. ಕೊರೋನಾದಿಂದ ಗಣಮುಖರಾದವರ ಸಂಖ್ಯೆ 2900ಕ್ಕೂ ಅಧಿಕವಾಗಿದೆ ಎಂದು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here