ಕೊರೋನಾ ಸೋಂಕು ಹೆಚ್ಚಳದ ಭೀತಿ ಬೇಡ: ಕಾಸರಗೋಡು ಜಿಲ್ಲಾಧಿಕಾರಿ ಡಾ.ಡಿ‌.ಸಜಿತ್ ಬಾಬು

0
119

ಕಾಸರಗೋಡು: ಕಾಸರಗೋಡು ಜಿಲ್ಲೆಯಲ್ಲಿ ಕೋವಿಡ್-19 ಪ್ರತಿರೋಧ ಚಟುವಟಿಕೆಗಳು ಪರಿಣಾಮಕಾರಿಯಾಗಿ ನಡೆಯುತ್ತಿದ್ದು, ಸೋಂಕು ಹೆಚ್ಚಳದ ಬಗ್ಗೆ ಸಾರ್ವಜನಿಕರಿಗೆ ಯಾವುದೇ ಆತಂಕ ಬೇಡ ಎಂದು ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಸೋಮವಾರ ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ಸಾಕಷ್ಟು ಇತಿಮಿತಿಗಳಿದ್ದರೂ, ಕೋವಿಡ್ ರೋಗದಿಂದ ಒಂದೇ ಒಂದು ಮರಣ ಸಂಭವಿಸಿಲ್ಲ ಎಂಬುದು ಗಮನಾರ್ಹ. ಎರಡನೇ ಹಂತದಲ್ಲಿ 70 ಮಂದಿಗೂ, ಮೂರನೇ ಹಂತದಲ್ಲಿ 11 ಮಂದಿಗೂ ಸಂಪರ್ಕ ಮೂಲಕ ಸೋಂಕು ತಗುಲಿದೆ ಎಂದವರು ನುಡಿದರು.
ಜಿಲ್ಲೆಯಲ್ಲಿ ಫೆಬ್ರವರಿ 3ರಂದು ಮೊದಲ ಕೋವಿಡ್ ಸೋಂಕು ವರದಿಯಾಗಿತ್ತು. ನಂತರ 39 ದಿನಗಳ ಬಳಿಕ ಮಾ.14ರಂದು ಎರಡನೇ ಸೋಂಕು ಪ್ರಕರಣ ವರದಿಯಾಗಿದೆ. ಮಾ.17ರಂದು ಮೂರನೇ ಕೇಸ್ ಜಿಲ್ಲೆಯಲ್ಲಿ ಖಚಿತಗೊಂಡಿತ್ತು. ನಂತರ ಕೋವಿಡ್ ರೋಗಿಗಳ ಸಂಖ್ಯೆ ಹೆಚ್ಚಳಗೊಂಡಿತ್ತು. ಮೂರನೇ ಹಂತದಲ್ಲಿ ಶೇಕಡಾ 4.31 (11 ಮಂದಿಗೆ) ರಷ್ಟು ಮಂದಿಗೆ ಮಾತ್ರ ಸಂಪರ್ಕ ಮೂಲಕ ಸೋಂಕು ತಗುಲಿತ್ತು.
34 ದಿನಗಳ ಅವಧಿಯಲ್ಲಿ ಯಾರಿಗೂ ಸಂಪರ್ಕ ಮೂಲಕ ಸೋಂಕು ಖಚಿತವಾಗಿಲ್ಲ. ಈ ವಿಚಾರಗಳನ್ನು ಗಮನಿಸಿದಾಗ
ಜಿಲ್ಲೆಯಲ್ಲಿ ಸಂಪರ್ಕದ ಮೂಲಕ ಕೊರೋನಾ ವೈರಸ್ ಸೋಂಕು ಹರಡುವ ಭೀತಿ ಯಾರಿಗೂ ಬೇಡ ಎಂದು ಅವರು ಹೇಳಿದರು.

LEAVE A REPLY

Please enter your comment!
Please enter your name here