Friday, August 12, 2022

Latest Posts

ಕೊರೋನಾ ಹರಡಿದ ದರಿದ್ರ ದೇಶ ಚೀನಾವನ್ನು ಮಟ್ಟಹಾಕಿ: ಜಗ್ಗೇಶ್ ಆಕ್ರೋಶ

ಬೆಂಗಳೂರು : ಖ್ಯಾತ ಹಿನ್ನೆಲೆ ಗಾಯಕ ಎಸ್.ಪಿ.ಬಾಲಸುಬ್ರಹ್ಮಣ್ಯಂ ಅವರ ಅಗಲುವಿಕೆಯ ಬಗ್ಗೆ ಎಲ್ಲೆಡೆ ತೀವ್ರ ದುಃಖ ವ್ಯಕ್ತಗೊಳ್ಳುತ್ತಿರುವಂತೆಯೇ, ಈ ಕೊರೋನಾ ಹೆಮ್ಮಾರಿಯನ್ನು ವಿಶ್ವಕ್ಕೆ ಹರಡಿರುವ ಕುಟಿಲ ಚೀನಾ ಬಗ್ಗೆ ಚಿತ್ರ ನಟ ಜಗ್ಗೇಶ್ ತೀವ್ರ ಆಕ್ರೋಶ ಹೊರಹಾಕಿದ್ದಾರೆ.ಈ ದರಿದ್ರ ದೇಶ ಚೀನಾವನ್ನು ವಿಶ್ವರಾಷ್ಟ್ರಗಳು ಒಂದಾಗಿ ಮೂಲೆಗುಂಪು ಮಾಡಬೇಕೆಂದು ಅವರು ಟ್ವೀಟ್ ಮಾಡಿದ್ದಾರೆ.
ದೇಶದ ಖ್ಯಾತನಾಮರು, ಸಾಧಕರು ಕೊರೋನಾ ಪಿಡುಗಿಗೆ ಬಲಿಯಾಗುತ್ತಿರುವ ದುಃಖ, ನೋವು, ಸಂಕಟಗಳ ಹಿನ್ನೆಲೆಯಲ್ಲಿ ಈ ಕೊರೋನಾ ಪಿಡುಗಿನ ಮೂಲಕಾರಣವಾದ ಲೋಕಕಂಟಕ ಕಮ್ಯುನಿಸ್ಟ್ ಚೀನಾದ ವಿರುದ್ಧ ಜಗ್ಗೇಶ್ ಅವರ ಆಕ್ರೋಶ ಹೊರಹೊಮ್ಮಿರುವುದು ಗಮನಸೆಳೆದಿದೆ.
ಯಾರ ಕಣ್ಣು ತಾಕಿತು! ಯಾವತಪ್ಪಿಗೆ ನಿಮಗೆ ಈಶಿಕ್ಷೆ!ಇನ್ನು ಎಷ್ಟು ಸಾಧಕರು ಈಸಾವಿನ ಶಿಕ್ಷೆಗೆ ಸಾಲು ನಿಂತಿಹರು !ವಿಶ್ವಶಾಂತಿ ಭಂಗಕ್ಕೆ ಕೊರೋನ
ಹರಡಿ ಮಳ್ಳಿಯಂತ ದರಿದ್ರದೇಶ ಚೀನವನ್ನ ವಿಶ್ವದ ಕಾಳಜಿ ಇರುವ ಇತರ ರಾಷ್ಟ್ರಗಳು ಮಟ್ಟಹಾಕಿ ಮೂಲೆಗುಂಪು ಮಾಡಬೇಕು!
ನನ್ನನೆಚ್ಚಿನ ಹೃದಯವನ್ನ ಈ ರೀತಿ ಕಳೆದುಕೊಳ್ಳುವೆ ಎನಿಸಲಿಲ್ಲಾ!ಓಂಶಾಂತಿ.!ಎಂಬುದಾಗಿ ಜಗ್ಗೇಶ್ ಟ್ವೀಟ್ ಮಾಡಿದ್ದಾರೆ.

 

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss