ಹೊಸದಿಲ್ಲಿ: ಕೊರೋನಾ ಹಾವಳಿ ದೇಶದ ಆರ್ಥಿಕತೆಯನ್ನೇ ಬಡಮೈಲುಗೊಳಿಸಿದ್ದರು, ಕಪುರ್ಥಾಲ್ದಲ್ಲಿನ ರೈಲ್ವೆ ಕೋಚ್ ಕಾರ್ಖಾನೆ ಕಳೆದ ವರ್ಷಕ್ಕೆ ಹೋಲಿಸಿದರೆ ಅಕ್ಟೋಬರ್ನಲ್ಲಿ ಉತ್ಪಾದನೆ ಪ್ರಮಾಣ ದ್ವಿಗುಣಗೊಂಡಿದೆ ಎಂದು ರೈಲ್ವೆ ಸಚಿವ ಪಿಯೂಷ್ ಗೋಯಲ್ ಹೇಳಿದ್ದಾರೆ.
ಹೌದು , ಒಂದೆಡೆ ಕೊರೋನಾ ಇದ್ದರೂ , ಮೇಕ್ ಇನ್ ಇಂಡಿಯಾ ಕೋವಿಡ್ ಪೂರ್ವದ ತಯಾರಿಕ ದಾಖಲೆಯನ್ನು ಅಳಿಸಿಹಾಕಿದೆ. ಈ ಮೂಲಕ ಹೆಚ್ಚು ಹೆಚ್ಚು ಉತ್ಪಾದನೆ ಯಾಗಿದ್ದು, ರೈಲ್ವೆ ಕೋಚ್ ಫ್ಯಾಕ್ಟರಿ ಕಪುರ್ಥಲಾ, ತನ್ನ ಉತ್ಪಾದನೆಯನ್ನು ದ್ವಿಗುಣಗೊಳಿಸಿಕೊಂಡಿದೆ.
ಅಕ್ಟೋಬರ್ನಲ್ಲಿ ಎಲ್ಎಚ್ಬಿ ತರಬೇತುದಾರರು ಹೆಚ್ಚಿನ ಉತ್ಪಾದಕತೆಯ ಗುರಿ ಸಾಧಿಸಿದೆ ಎಂದು ಪಿಯೂಷ್ ಗೋಯಲ್ ಟ್ವೀಟ್ ಮಾಡಿದ್ದಾರೆ. ಇದು ಕಳೆದ ವರ್ಷ ಇದೇ ಅವಧಿಯಲ್ಲಿ 3.08 ಬೋಗಿಗಳಂತೆ ದಿನಕ್ಕೆ 5.88 ಬೋಗಿಗಳನ್ನು ಉತ್ಪಾದಿಸಿದೆ ಎಂದು ಗೋಯಲ್ ಟ್ವೀಟ್ ಮಾಡಿದ್ದಾರೆ.
Make in India Breaks Pre-COVID Manufacturing Records: Rail Coach Factory, Kapurthala doubled its production and achieved highest productivity of safer LHB coaches in October.
It produced 5.88 coaches per day as against 3.08 coaches last year in same period. pic.twitter.com/X1OKiyHavn
— Piyush Goyal (@PiyushGoyal) November 2, 2020