Friday, August 19, 2022

Latest Posts

ಕೊರೋನಾ ಹಿನ್ನಲೆ: ದೀಪಾವಳಿಯ ದೀವಟಿಗೆ ಉತ್ಸವ ರದ್ದು

ಹೊಸ ದಿಗಂತ ವರದಿ ಮೈಸೂರು:

ಮೈಸೂರು: ಜಿಲ್ಲೆಯಲ್ಲಿ ಆರ್ಭಟಿಸುತ್ತಿರುವ ಮಹಾಮಾರಿ ಕೊರೋನಾ ವೈರಾಣು ಸೋಂಕು ಹರಡುವಿಕೆಯನ್ನು ನಿಯಂತ್ರಿಸುವ ಉದ್ದೇಶದಿಂದ ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ತಾಲೂಕಿನ ಬೆಟ್ಟದಪುರದಲ್ಲಿ ಈ ಬಾರಿ ನಡೆಯಬೇಕಿದ್ದ ದೀಪಾವಳಿಯ ದೀವಟಿಗೆ ಉತ್ಸವವನ್ನ ರದ್ದುಗೊಳಿಸಲಾಗಿದೆ.

ದೀಪಾವಳಿ ಹಬ್ಬದ ಪ್ರಯುಕ್ತ ಪ್ರತಿ ವರ್ಷ ಬೆಟ್ಟದಪುರ ಸುತ್ತ ಮುತ್ತಲಿನ ಹತ್ತಾರು ಗ್ರಾಮಗಳಿಂದ ಸಿಡಿಲು ಮಲ್ಲಿಕಾರ್ಜುನನಿಗೆ ದೀವಟಿಗೆ ಸೇವೆ ನಡೆಯುತ್ತಿತ್ತು. ಹತ್ತಾರು ಕೀಲೋ ಮೀಟರ್ ಸುತ್ತ ಬೆಳ್ಳಿ ಬಸವನ ಮೆರವಣಿಗೆಯನ್ನು ವಿಜೃಂಭಣೆಯಿAದ ನಡೆಸಲಾಗುತ್ತಿತ್ತು. ಆದರೆ ಈ ಬಾರಿ ಕೊರೋನಾ ಹರಡುತ್ತಿರುವ ಹಿನ್ನೆಲೆ ಸಾರ್ವಜನಿಕ ಹಿತದೃಷ್ಟಿಯಿಂದ ಈ ಬಾರಿ ಮೆರವಣಿಗೆ ನಡೆಸಲು ಅವಕಾಶವನ್ನು ನೀಡಿಲ್ಲ.

ಸರಳ ದಿವಟಿಗೆ ಉತ್ಸವದ ಮೆರವಣಿಗೆಯನ್ನು ಪಿರಿಯಾಪಟ್ಟಣ ತಾಲ್ಲೂಕು ಆಡಳಿತ ರದ್ದುಪಡಿಸಿ ಆದೇಶ ಹೊರಡಿಸಿದೆ.
ಸಂಪ್ರದಾಯದಂತೆ ಬೆಟ್ಟದಪುರ ದೇವಲಯದ ಆವರಣದಲ್ಲಿ ಮಾತ್ರ ಮೆರವಣಿಗೆ ನಡೆಯಲಿದ್ದು ದೇವಾಲಯದ ಅವರಣದಲ್ಲಿಯೇ ಸಂಪ್ರದಾಯಕ ಪೂಜಾ ಕಾರ್ಯಗಳು ನೆರವೇರಲಿವೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss

error: Content is protected !!