Wednesday, August 17, 2022

Latest Posts

ಕೊರೋನಾ ಹೋರಾಟದಲ್ಲಿ ಕಾರ್ಯನಿರ್ವವಹಿಸುತ್ತಿರುವ ಪೊಲೀಸರಿಗೆ ಸೇನಾಧಿಕಾರಿ ಪ್ರಶಂಸೆ: ವಿಡಿಯೋ ಶೇರ್ ಮಾಡಿದ ಅನುಪಮ್ ಖೇರ್

ಹೊಸದಿಲ್ಲಿ: ಭಾರತೀಯ ಸೇನಾಧಿಕಾರಿ ಕೊರೋನಾ ವಾರಿಯರ್ಸ್ ಪೊಲೀಸ್ ಅಧಿಕಾರಿಗಳನ್ನು ಅಭಿನಂದಿಸಿ ಸಿಹಿ ಹಂಚುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ರಾಜಸ್ತಾನದಲ್ಲಿ ಸೇನಾಧಿಕಾರಿಗಳು ಸೇವೆ ನಿರತ ಪೋಲೀಸರಿಗೆ,ಟ್ರಾಫಿಕ್ ಪೋಲೀಸರಿಗೆ ಸಿಹಿ ಹಂಚಿ ಅಭಿನಂದಿಸಿದ್ದಾರೆ. ನಟ ಅನುಪಮ್ ಖೇರ್ ಈ ವಿಡಿಯೋ ವನ್ನು ಶೇರ್ ಮಾಡಿದ್ದು ಲಾಲ್ ಡೌನ್ ಸಂದರ್ಭದಲ್ಲಿ ನಾನು ನೋಡಿರುವ ಹೆಚ್ಚು ಪ್ರೇರಣದಾಯಕ ವಿಡಿಯೋ ಎಂದು ಹೇಳಿದ್ದಾರೆ. ಇದನ್ನು 3 ಲಕ್ಷ ಜನ ವೀಕ್ಷಿಸಿದ್ದಾರೆ. ಸೇನಾಧಿಕಾರಿ ಯೂ ಈ ವಿಡಿಯೋ ವನ್ನು ಶೇರ್ ಮಾಡಿದ್ದು ಸೇನಾಧಿಕಾರಿಯ ಕಾರ್ಯಕ್ಕೆ ಸಾರ್ವಜನಿಕರು ಮೆಚ್ವುಗೆ ಸೂಚಿಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss

error: Content is protected !!