Friday, January 22, 2021

Latest Posts

ಕೊಲೆಗೈದ ಏಳು ಗಂಟೆಯಲ್ಲಿಯೇ ಆರೋಪಿಗಳ ಬಂಧನ: ಪೊಲೀಸರ ಕಾರ್ಯಕ್ಕೆ ಜನತೆ ಪ್ರಶಂಸೆ

ಹುಣಸಗಿ (ಯಾದಗಿರಿ) :

ಪಟ್ಟಣದಲ್ಲಿ ಬುಧವಾರ ಸಿನೀಮಿಯಾ ರೀತಿಯಲ್ಲಿ ವ್ಯಕ್ತಿಯೋರ್ವನನ್ನು ಕೊಲೆಗೈದು ಬೆಳ್ಳಿ, ಬಂಗಾರ ದೋಚಲಾಗಿದ್ದ ದುಷ್ಕರ್ಮಿಗಳ ಹುಣಸಗಿ ಪೊಲೀಸರು ಕೇವಲ ಏಳು ಗಂಟೆಯಲ್ಲಿಯೇ ಆರೋಪಿಗಳನ್ನು ಬಂಧಿಸಿ ತಮ್ಮ ಖದರ್ ತೋರಿಸಿದ್ದಾರೆ.
ಬಸ್‌ಸ್ಟಾಡ್ ಹತ್ತಿರದ ಬಂಗಾರ ವ್ಯಾಪಾರಿ ಜಗದೀಶ ಸಿರವಿ ಎನ್ನುವ ಮಗನಾದ ನರೇಂದ್ರ ಸಿರವಿ ಅವನನ್ನು ಬುಧವಾರ ದುಷ್ಕರ್ಮಿಗಳಿಬ್ಬರು ಹರಿತವಾದ ಆಯುಧವನ್ನು ಬಳಸಿ ಕೊಲೆ ಮಾಡಿ ತಲೆ ತಪ್ಪಿಸಿಕೊಂಡಿದ್ದರು.
ಮನೆಯಿoದ 1 ಕೆ.ಜಿ. 500 ಗ್ರಾಂ. ಬಂಗಾರ, 10 ಕೆ.ಜಿ. 500 ಗ್ರಾಂ ಬೆಳ್ಳಿ ಆಭರಣಗಳನ್ನು ಕಳ್ಳತನ ಮಾಡಿದ್ದರು. ಆರೋಪಿಯನ್ನು ಕೇವಲ ಏಳು ಗಂಟೆಯಲ್ಲಿ ಬಂದಿಸಲು ಮೊಬೈಲ್ ಕರೆ ಕಾರಣವಾಗಿದೆ.
ಯಾದಗಿರಿ ಎಸ್.ಪಿ. ಋಷಿಕೇಶ ಭಗವಾನ್ ಸೋನಾವಣೆ, ಡಿ.ಎಸ್.ಪಿ ವೆಂಕಟೇಶ ಉಗಿಬಂಡಿ, ಹುಣಸಗಿ ಸಿಪಿಐ ದೌಲತ್ ಎನ್.ಕೆ., ಹುಣಸಗಿ ಪಿಎಸ್‌ಐ ಬಾಪುಗೌಡ ಪಾಟೀಲ್, ಕೊಡೇಕಲ್ ಪಿಎಸ್‌ಐ ಬಾಷುಮಿಯಾ ಹಾಗೂ ಸಿಬ್ಬಂದಿಯೊoದಿಗೆ 4 ತಂಡಗಳನ್ನು ರಚಿಸಿ ಆರೋಪಿಗಳಾದ ಕಿಶೋರ, ಅಜೀತ್‌ನನ್ನು ಪೊಲೀಸರು ಬಂದಿಸಿ ಒಂದು ಮೋಟಾರ್ ಸೈಕಲ್, ಒಂದು ಚಾಕು ಜಪ್ತಿ ಮಾಡಿಕೊಂಡಿದ್ದಾರೆ.
ಆರೋಪಿಗಳಿಂದ ವಶಪಡಿಸಿಕೊಂಡ ವಸ್ತುಗಳ ಮೌಲ್ಯ ಅಂದಾಜು ಒಂದು ಕೋಟಿಗಳಷ್ಟಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಋಷಿಕೇಶ ಭಗವಾನ್ ಹುಣಸಗಿಯಲ್ಲಿ ನಡೆದ ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಕೆಲ ವರ್ಷಗಳ ಹಿಂದೆ ಬಂಗಾರದ ಅಂಗಡಿಯೊoದನ್ನು ದೋಚಲು ದುಶ್ಕರ್ಮಿಯೊಬ್ಬ ಬಂದುಕಿoನೊದಿಗೆ ದಾಳಿ ಮಾಡಿದಾಗಲೂ ಹುಣಸಗಿಯ ಪೊಲೀಸ್‌ರು ಸಾರ್ವಜನಿಕರ ಸಹಕಾರದೊಂದಿಗೆ ಬಂದಿಸಿದ್ದನ್ನು ಇಲ್ಲಿ ಸ್ಮರಿಸಬಹುದು.
ಆರೋಪಿಗಳನ್ನು ಬಂಧಿಸುವಲ್ಲಿ ಕೊಂಚ ವಿಳಂಭವಾದರೂ ಪ್ರಕರಣ ಜಟಿಲವಾಗುತ್ತಿತ್ತು. ಡಿ.ವೈ.ಎಸ್.ಪಿ ವೆಂಕಟೇಶ, ಸಿಪಿಐ ಎನ್.ಕೆ.ದೌಲತ್ ಹಾಗೂ ಪಿಎಸ್‌ಐಗಳಾದ ಬಾಪುಗೌಡ, ಬಾಷುಮಿಯಾ ಅವರ ಸಮಯ ಪ್ರಜ್ಞೆಯಿಂದ ಇಲಾಖೆಗೆ ಒಳ್ಳೆಯ ಹೆಸರು ತಂದಿದ್ದಾರೆ ಎಂದು ಎಸ್.ಪಿ ಪ್ರಶಂಸಿದರು.
ಎಎಸ್‌ಐಗಳಾದ ಮೌನೇಶ ಬಡಿಗೇರ, ಶ್ರೀಶೈಲ್ ಸ್ವಾಮಿ, ಮಾಣೀಕರಡ್ಡಿ, ಕೆಂಚಪ್ಪ ಪೂಜಾರಿ, ರವಿ ಸಿಂದಗಿ, ಮಲ್ಲು ಕೆಂಭಾವಿ, ಹಣಮಂತ, ನಿಂನಗೌಡ, ಅಜ್ಮೀರ್, ಬಸವರಾಜ ಜಾಲಹಳ್ಳಿ, ಪರಮಾನಂದ ಸೇರಿದಂತೆ ಇತರ ಸಿಬ್ಬಂಧಿ ಇದ್ದರು.
ಪೊಲೀಸರ ಈ ಕಾರ್ಯಕ್ಕೆ ಹುಣಸಗಿಯ ಜನತೆ ಸಂತಸ ವ್ಯಕ್ತ ಪಡಿಸಿದ್ದಾರೆ.

ಸುದ್ದಿ ಇಷ್ಟವಾಯ್ತಾ, ಇತರರಿಗೂ ಶೇರ್ ಮಾಡಿ, ಓದಿಸಿ.

Whatsapp Group
Telegram

Latest Posts

Don't Miss

error: Content is protected !!