ಹೊಸದಿಗಂತ ವರದಿ, ಮೈಸೂರು:
ನಗರದ ಎಲೆತೋಟದಲ್ಲಿ ಇಬ್ಬರು ವ್ಯಕ್ತಿಗಳನ್ನು ಕೊಲೆ ಮಾಡಿದ್ದ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ
ಮೀಸೆಸ್ವಾಮಿ, ರಘು ಬಂಧಿತ ಆರೋಪಿಗಳು. ಘಟನೆ ಸಂಬoಧ ಮತ್ತಿಬ್ಬರು ಆರೋಪಿಗಳಾದ ದಿಲೀಪ್ ಹಾಗೂ ರಘು ಬಂಧನಕ್ಕೆ ಪೊಲೀಸರು ಶೋಧ ಕಾರ್ಯ ನಡೆಸುತ್ತಿದ್ದಾರೆ.
ಮೈಸೂರಿನಲ್ಲಿ ಎಲೆ ತೋಟದ ಬಳಿ ಕಿರಣ್ ಮತ್ತು ಕಿಶನ್ ಎಂಬುವವರನ್ನ ಭಾನುವಾರ ತಡರಾತ್ರಿ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಲಾಗಿತ್ತು. ಇದೀಗ ಗೌರಿಶಂಕರ ಬಡಾವಣೆಯ ನಿವಾಸಕ್ಕೆ ಸಂಬoಧಿಸಿದ ಗಲಾಟೆ, ಹಳೆ ದ್ವೇಷದ ಹಿನ್ನೆಲೆಯಲ್ಲಿ ಕೊಲೆ ಮಾಡಿರುವುದಾಗಿ ಆರೋಪಿಗಳು ಒಪ್ಪಿಕೊಂಡಿದ್ದಾರೆ. ಕಿರಣ್ ಆಟೊಚಾಲಕನಾಗಿದ್ದ. ಕಿಶನ್ ಕಾರ್ ಶೋರಂನಲ್ಲಿ ಕೆಲಸ ಮಾಡುತ್ತಿದ್ದನು. 2016 ರಲ್ಲಿ ಕೆ.ಆರ್.ಠಾಣೆಯಲ್ಲಿ ರೌಡಿ ಶೀಟರ್ ಆಗಿದ್ದನು ಎಂದು ಮೈಸೂರು ನಗರ ಡಿಸಿಪಿ ಡಾ.ಎ.ಎನ್ ಪ್ರಕಾಶ್ ಗೌಡ ತಿಳಿಸಿದ್ದಾರೆ.