ಕೊಲ್ಕತ್ತಾ| ಅಂಫಾನ್ ಸೂಪರ್ ಚಂಡಮಾರುತಕ್ಕೆ ಕೊಲ್ಕತ್ತಾ ವಿಮಾನ ನಿಲ್ದಾಣ ತತ್ತರ

0
240

ಕೊಲ್ಕತ್ತಾ: ಕಳೆದ ಆರು ಗಂಟೆಯಿಂದ ಬೀಸುತ್ತಿರುವ ಅಂಫಾನ್ ಚಂಡಮಾರುತಕ್ಕೆ ಕೊಲ್ಕತ್ತಾದ ವಿಮಾನ ನಿಲ್ದಾಣದಲ್ಲಿ ಪ್ರವಾಹ ಉಂಟಾಗಿದೆ. ಬಿರುಗಾಳಿ ಸಹಿತ ಭಾರೀ ಮಳೆ ಯಾಗುತ್ತಿದ್ದು ಇದರ ಪರಿಣಾಮವಾಗಿ ವಿಮಾನ ನಿಲ್ದಾಣವು ಅಸ್ತವ್ಯಸ್ತವಾಗಿದೆ.

ರನ್ ವೇ, ಹ್ಯಾಂಗರ್ ಗಳು ಸಂಪೂರ್ಣ ಮುಳುಗಡೆಯಾಗಿದ್ದು ಒಂದು ಭಾಗದಲ್ಲಿ ವಿಮಾನದ ಮೇಲ್ಛಾವಣಿ ಯೂ ಮುಳುಗಿರುವುದು ದೃಶ್ಯಗಳಲ್ಲಿ ಕಾಣುತ್ತಿದೆ. ದುರಸ್ತಿಯಲ್ಲಿದ್ದ ವಿಮಾನಗಳೆರಡು ಮುಳುಗಡೆಯಾಗಿದೆ.ಲಾಕ್ ಡೌನ್ ಹಿನ್ನೆಲೆ ಸರಕು ಹಾಗೂ ಸಾಗಾಣಿಕೆ ವಿಮಾನ ಮಾತ್ರ ಕಾರ್ಯಚರಿಸುತ್ತಿದ್ದು ಇದೀಗ ಚಂಡಮಾರುತದಿಂದಾಗಿ ಇಂದು ಬೆಳಿಗ್ಗೆ 5 ಗಂಟೆಗೆ ಎಲ್ಲಾ ಹಾರಾಟವನ್ನು ಸ್ಥಗಿತಗೊಳಿಸಲಾಗಿದೆ.

ಪ.ಬಂಗಾಳದಲ್ಲಿ 12 ಜನ ಸಾವನಪ್ಪಿದ್ದು 1 ಲಕ್ಷ ಕೋಟಿ ಹಾನಿಯಾಗಿದೆ ಎಂದು ಅಂದಾಜಿಸಲಾಗಿದೆ. ಗಂಟೆಗೆ 120 ಕಿ.ಮೀ ವೇಗದಲ್ಲಿ ಚಂಡಮಾರುತ ಬೀಸುತ್ತಿರುವ ಪರಿಣಾಮ, ಗಿಡಮರಗಳು, ಕಟ್ಟಡಗಳು ನೆಲಸಮವಾಗಿದೆ. ಈಗಾಗಲೇ 5ಲಕ್ಷ ಜನರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರ ಮಾಡಲಾಗಿದೆ.

LEAVE A REPLY

Please enter your comment!
Please enter your name here